ಬಾದಾಮಿ ತಾಲೂಕಿನ ಕೆರೂರು ಘರ್ಷಣೆ ವೇಳೆ ನಡೆದ ಹಲ್ಲೆಯಲ್ಲಿ ಗಾಯಗೊಂಡಿದ್ದ ಸಂತ್ರಸ್ತರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ್ದ ಹಣವನ್ನು ಅವರ ಕುಟುಂಬಸ್ಥರು ಅವರ ವಾಹನದ ಮೇಲೆ ಎಸೆದ ಘಟನೆ ನಡೆದಿದೆ. ಘರ್ಷಣೆಯಲ್ಲಿ ಗಾಯಗೊಂಡಿದ್ದ ನಾಲ್ವರಿಗೆ ತಲಾ 50 ಸಾವಿರ ರೂ. ಸಿದ್ದರಾಮಯ್ಯ ನೀಡಿದ್ದರು.
ರಫೀಕ್ ಎಂಬವರ ಆರೋಗ್ಯ ವಿಚಾರಿಸಿ ₹ 2 ಲಕ್ಷ ಪರಿಹಾರ ನೀಡಿದ್ದರು. ಆದರೆ ಸಿದ್ದು ನೀಡಿದ ಪರಿಹಾರ ದುಡ್ಡನ್ನು ರಜ್ಮಾ ಎಂಬ ಮಹಿಳೆ ಅವರ ಕಾರಿಗೆ ಎಸೆದು ಹಣ ಬೇಡ ನೆಮ್ಮದಿ ಬೇಕು ಎಂದು ಕೂಗಿದ ಘಟನೆ ನಡೆದಿದೆ.
ಹೌದು, ಘಟನೆ ನಡೆದು ಇಷ್ಟು ದಿನ ಆದ ಬಳಿಕ ಸಾಂತ್ವಾನಕ್ಕೆಂದು ಬಂದಿದ್ದೀರಾ. ನಮಗೆ ದುಡ್ಡು ಬೇಡ ನ್ಯಾಯ ಕೊಡಿ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು, ಗುಂಪು ಘರ್ಷಣೆಯಲ್ಲಿ ಮೊಹಮ್ಮದ್ ಹನೀಫ್, ದಾವಲ್ ಮಲಿಕ್ ಹಾಗೂ ರಾಜೇ ಸಾಬ್ ಎಂಬವರು ಗಾಯಗೊಂಡಿದ್ದರು.