ಹೊಸಪೇಟೆ: ದೇಶದ ಅತಿ ಎತ್ತರದ 405 ಅಡಿ ಎತ್ತರದ ಧ್ವಜಸ್ತಂಭವನ್ನು ಹೊಸಪೇಟೆಯ ಮುನ್ಸಿಪಲ್ ಮೈದಾನದಲ್ಲಿ ಅಳವಡಿಸಲಾಗಿದೆ. ಬೆಳಗಾವಿಯಲ್ಲಿನ 361 ಅಡಿ ಎತ್ತರದ ಧ್ವಜಸ್ತಂಭ ಈವರೆಗೆ ದೇಶದ ಎತ್ತರದ ಧ್ವಜಸ್ತಂಭವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇನ್ನು ಆ ದಾಖಲೆ ವಿಜಯನಗರದ ಪಾಲಾಗಲಿದೆ.
ಹೌದು, 6 ಕೋಟಿ ರೂ ಅನುದಾನದಲ್ಲಿ ಹೊಸಪೇಟೆಯಲ್ಲಿ 405 ಅಡಿ ಎತ್ತರದ ಧ್ವಜಸ್ತಂಭವನ್ನು ನಿರ್ಮಿಸಲಾಗಿದ್ದು, 120X80 ಅಡಿ ಅಳತೆಯ ಧ್ವಜ ತಯಾರಿಸಲಾಗಿದೆ. ಪುಣೆಯ ಬಜಾಜ್ ಕಂಪನಿಯ 85 ನುರಿತ ಕಾರ್ಮಿಕರು ಒಂದು ವಾರದಿಂದ ಧ್ವಜ ಸ್ತಂಭದ 13 ಬಿಡಿಭಾಗಗಳನ್ನು ಜೋಡಿಸಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.