ಬಳ್ಳಾರಿ: ಬಾಲಕಿಗೆ ಬರೋಬ್ಬರಿ ₹53.07 ಲಕ್ಷ ಪರಿಹಾರ ಘೋಷಿಸಿದ ಸುಪ್ರೀಂ ಕೋರ್ಟ್

ಬಳ್ಳಾರಿ: ಬಳ್ಳಾರಿಯ ಕುಡಿತಿನಿಯಲ್ಲಿ 2012ರ ಏಪ್ರಿಲ್ 19ರಂದು ಸಂಭವಿಸಿದ ಅಪಘಾತದಲ್ಲಿ ಬಾಲಕಿಯ ಒಂದು ಕಾಲು ತುಂಡಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಬಾಲಕಿಗೆ ₹53.07 ಲಕ್ಷ ಪರಿಹಾರವನ್ನು ಹೆಚ್ಚಿಸಿ ಆದೇಶ ನೀಡಿದೆ.…

supreme court vijayaprabha

ಬಳ್ಳಾರಿ: ಬಳ್ಳಾರಿಯ ಕುಡಿತಿನಿಯಲ್ಲಿ 2012ರ ಏಪ್ರಿಲ್ 19ರಂದು ಸಂಭವಿಸಿದ ಅಪಘಾತದಲ್ಲಿ ಬಾಲಕಿಯ ಒಂದು ಕಾಲು ತುಂಡಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಬಾಲಕಿಗೆ ₹53.07 ಲಕ್ಷ ಪರಿಹಾರವನ್ನು ಹೆಚ್ಚಿಸಿ ಆದೇಶ ನೀಡಿದೆ.

ಬಳ್ಳಾರಿ ಜಿಲ್ಲೆಯ ಕುಡಿತಿನಿಯ ಅಭಿರುಚಿ ಫ್ಯಾಮಿಲಿ ರೆಸ್ಟೋರೆಂಟ್ ಎದುರು ಬಾಲಕಿಯು ಅಪಘಾತಕ್ಕೊಳಗಾಗಿದ್ದಳು. ತಾಯಿಯೊಂದಿಗೆ ಹಿಟ್ಟಿನ ಗಿರಣಿಗೆ ತೆರಳಿದ್ದ ಬಾಲಕಿಯು ಮನೆಗೆ ಹಿಂತಿರುಗುವಾಗ ಲಾರಿಯೊಂದು ಡಿಕ್ಕಿ ಹೊಡೆದು ಆಕೆಯ ಬಲಗಾಲಿನ ಮೇಲೆ ಹರಿದಿತ್ತು. ಇದರಿಂದ ಬಾಲಕಿ ಸೊಂಟದ ಕೆಳಭಾಗದಲ್ಲಿ ಗಂಭೀರ ಗಾಯಗಳಾಗಿದ್ದು, ಜೀವನ ಪರ್ಯಂತ ಶಾಶ್ವತವಾದ ಅಂಗವೈಕಲ್ಯಕ್ಕೊಳಗಾಗಿದ್ದಾಳೆ.

ಇನ್ನು, ಬಾಲಕಿ ಶಾಶ್ವತವಾದ ಅಂಗವೈಕಲ್ಯ ಕಾರಣದಿಂದ ಭವಿಷ್ಯದಲ್ಲಿ ಗಳಿಕೆ ಮತ್ತು ಮದುವೆಯ ನಿರೀಕ್ಷೆಯನ್ನೂ ಕೈಬಿಟ್ಟಿದ್ದಾಳೆ. ಈ ಸಂಬಂಧ ಬಾಲಕಿಗೆ ₹ 53.07 ಲಕ್ಷ ಪರಿಹಾರವನ್ನು ಹೆಚ್ಚಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.