ದೇಶಾದ್ಯಂತ ಆಚರಿಸುವ ಅತಿ ದೊಡ್ಡ ಹಬ್ಬಗಳಲ್ಲಿ ‘ಶಿವರಾತ್ರಿ’ ಹಬ್ಬವೂ ಕೂಡ ಪ್ರಮುಖವಾದದ್ದು, ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸುವ ಶಿವರಾತ್ರಿ ಹಬ್ಬವನ್ನು ಇಡೀ ದಿನ ಉಪವಾಸ, ಜಾಗರಣೆ ಮಾಡುತ್ತಾ, ಶಿವ ಪೂಜೆಯನ್ನು ಮಾಡುವ ಮೂಲಕ ಆಚರಣೆ ಮಾಡಲಾಗುತ್ತದೆ.
ಇನ್ನು ಮಹಾಶಿವರಾತ್ರಿ ವೇಳೆ ಶಿವ ಪಾರ್ವತಿ ಸಮೇತ ಭೂಲೋಕಕ್ಕೆ ಬಂದು ಸಂಚಾರ ಮಾಡಲಿದ್ದು, ಈ ದಿನದಂದು ಯಾರು ನಿಷ್ಕಲ್ಮಷ ಮನಸ್ಸಿನಿಂದ, ಶಿವನಾಮ ಸ್ಮರಣೆ ಮಾಡಿ ಪೂಜಿಸುತ್ತಾರೋ ಅವರ ಪಾಪಗಳು ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ.
ಶಿವನಾಮ ಸ್ಮರಣೆಗೆ ಶ್ಲೋಕಗಳು;
ಓಂ ತ್ರಯಂಬಕಂ ಯಜಾಮಹೇ
ಸುಗಂಧಿಂ ಪುಷ್ಠಿ ವರ್ಧನಂ
ಉರ್ವಾರುಕ ಮಿವ ಬಂಧನಾನ್
ಮೃತ್ಯೋರ್ ಮುಕ್ಷೀಯಮಾಮೃತಾತ್…
ನಾಗೇಂದ್ರ ಹಾರಾಯ ತ್ರಿಲೋಚನಾಯ
ಭಸ್ಮಾಂಗ ರಾಗಾಯ ಮಹೇಶ್ವರಾಯ
ನಿತ್ಯಾಯ ಶುದ್ಧಾಯ ದಿಗಂಬರಾಯ
ತಸ್ಮೈನ ಕಾರಾಯ ನಮಃ ಶಿವಾಯ…