ಬೆಂಗಳೂರು: ಕುರುಬರ ಎಸ್ಟಿ ಮೀಸಲಾತಿ ಶಕ್ತಿ ಪ್ರದರ್ಶನ ಅಂಗವಾಗಿ ರಾಜಧಾನಿ ಬೆಂಗಳೂರಿನಲ್ಲಿ ಕುರುಬರ ರಣಕಹಳೆ ಶುರುವಾಗಿದ್ದು ರಾಜ್ಯದ ಎಲ್ಲೆಡೆಯಿಂದ ವಾಹನಗಳಲ್ಲಿ ಬಂದ ಲಕ್ಷಾಂತರ ಜನರಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದು ವಾಹನ ಸವಾರರು ಪರದಾಡುವಂತೆ ಆಗಿದೆ.
ಬೆಂಗಳೂರು- ಮಂಗಳೂರು ಹೆದ್ದಾರಿ, ಬೆಂಗಳೂರು – ತುಮಕೂರು ರಸ್ತೆ, ಬೆಂಗಳೂರು- ಮಂಗಳೂರು ಹೆದ್ದಾರಿ, ರಾಷ್ಟೀಯ ಹೆದ್ದಾರಿ ೪ ರಲ್ಲಿ, ಕಡಬಗೆರೆ ಕ್ರಾಸ್,ನೈಸ್ ರಸ್ತೆ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದ್ದು ಕಿಲೋಮೀಟರ್ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ಮಾವೇಶ ಹಿನ್ನಲೆ ೫ ಕಡೆ ಮಾರ್ಗ ಬದಲಾವಣೆ ಮಾಡಲಾಗಿದೆ.
ಇಂದು ಭಾನುವಾರ ರಜೆಯ ದಿನವಾಗಿದ್ದು, ಬೆಂಗಳೂರಿನಲ್ಲಿ ಮೋಜು, ಮಸ್ತಿ, ಮಾಡಲು ಹೊರಗಡೆ ಬರುತ್ತಿದ್ದ ಜನರಿಗೆ ಕುರುಬರ ಎಸ್ಟಿ ಮೀಸಲಾತಿ ಸಮಾವೇಶ ಹಿನ್ನಲೆ ರಾಜ್ಯದೆಲ್ಲೆಡೆಯಿಂದ ಬಂದ ವಾಹನಗಳಿಂದ ಉಂಟಾಗಿದ್ದು ವಾಹನ ಸವಾರರು ಪರದಾಡು ಸ್ಥಿತಿ ಏರ್ಪಟ್ಟಿತ್ತು.