ಅಡುಗೆ ಎಣ್ಣೆ ವಿಚಾರದಲ್ಲಿ ಕೇಂದ್ರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಅಗತ್ಯ ವಸ್ತು ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಇಲ್ಲಿದೆ ಸಿಹಿಸುದ್ದಿ ನೀಡಿದ್ದು, ಆಯ್ದ ಖಾದ್ಯ ತೈಲಗಳ ಸಬ್ಸಿಡಿ ಆಮದು ಸುಂಕದ ಲಾಭವನ್ನು ಮುಂದುವರೆಸುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ. ಮುಂದಿನ ವರ್ಷ ಮಾರ್ಚ್ ಅಂತ್ಯದವರೆಗೆ ಗಡುವನ್ನು ವಿಸ್ತರಿಸಲಾಗುತ್ತಿದೆ.
ಈ ಹಿನ್ನೆಲೆ ದೇಶದ ಮಾರುಕಟ್ಟೆಯಲ್ಲಿ ಖಾದ್ಯ ತೈಲಗಳು ಪೂರೈಕೆಯನ್ನು ಹೆಚ್ಚಿಸಲಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ಬೆಲೆ ಇಳಿಕೆಯಾಗಿದೆ. ಹೀಗಾಗಿ ದೇಶೀಯ ಮಾರುಕಟ್ಟೆಯಲ್ಲಿ ಅಡುಗೆ ತೈಲ ಇಳಿಕೆಯಾಗುತ್ತಿದೆ ಎಂದು ಹೇಳಿದೆ.
ಕಳೆದ 2 ವರ್ಷಗಳಿಂದ ಏರಿಕೆಯಾಗಿದ್ದ ಅಡುಗೆ ಎಣ್ಣೆ ಬೆಲೆ 30-40% ಇಳಿಕೆಯಾಗಿದೆ. ಕೊರೋನಾ ಪೂರ್ವದಲ್ಲಿ 1 ಲೀ.ಗೆ ₹100 ಇದ್ದ ತಾಳೆ ಎಣ್ಣೆ ದರ ₹165ಗೆ ಹೆಚ್ಚಳವಾಗಿತ್ತು. ₹140 ಸಮೀಪದಲ್ಲಿದ್ದ ಸೂರ್ಯಕಾಂತಿ, ಶೇಂಗಾ ಎಣ್ಣೆ ದರ ₹200 ಏರಿತ್ತು. ಇದೀಗ 1ಲೀ. ತಾಳೆ ಎಣ್ಣೆ ದರ ₹95 ರಿಂದ ₹90 ಇದ್ದು, ಮುಂಬರುವ ದಿನಗಳಲ್ಲಿ ₹10-15 ಕಡಿಮೆಯಾಗಬಹುದು. ಸೂರ್ಯಕಾಂತಿ & ಶೇಂಗಾ ಎಣ್ಣೆ ಸದ್ಯ ₹150 ಅಸುಪಾಸಿನಲ್ಲಿದೆ.




