ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿದ ಜನತೆಗೆ ಅಡುಗೆ ಎಣ್ಣೆ ಬೆಲೆ ಇಳಿಕೆ ಸಂತಸ ತಂದಿದೆ. ಹೌದು, ದೇಶದಲ್ಲಿ ಅಡುಗೆ ಎಣ್ಣೆ ಬೆಲೆ ಇಳಿಕೆಯಾಗಿದ್ದು, ಜುಲೈ 3ನೇ ವಾರದಿಂದ ದರ ಇಳಿಸಲು ಕೇಂದ್ರ ಸರ್ಕಾರ ಸೂಚಿಸಿದ್ದು, ಬರೋಬ್ಬರಿ 200 ರೂ ಸಮೀಪದಲ್ಲಿದ್ದ 1 ಲೀಟರ್ ಅಡುಗೆ ಎಣ್ಣೆ ದರ ಸದ್ಯ 165 ರೂ ಆಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಇಳಿಕೆಯಾಗಿದ್ದು, ಆಮದು ಮಾಡಿಕೊಳ್ಳುವ ಅಡುಗೆ ಎಣ್ಣೆಯ ಎಂಆರ್‌ಪಿಯನ್ನು ಇಳಿಸಲು ಕೇಂದ್ರ ಸರ್ಕಾರ ತಿಳಿಸಿತ್ತು.
2.5 ಲಕ್ಷ ಟನ್ ಈರುಳ್ಳಿ ಸಂಗ್ರಹ:
ಇನ್ನು, ಯಾವಾಗಲೂ ಈರುಳ್ಳಿ ಬೆಲೆ ಏರಿಕೆಯಾಗುತ್ತಲೇ ಇರುತ್ತದೆ. ಈ ಏರಿಕೆಗೆ ಬ್ರೇಕ್ ಹಾಕಲು ಸರ್ಕಾರ ಹೊಸ ಕ್ರಮ ಕೈಗೊಂಡಿದ್ದು,ಈರುಳ್ಳಿಯನ್ನು ಸಮರ್ಪಕ ಪೂರೈಕೆ ಮಾಡಲು ಸರ್ಕಾರವು 2.5 ಲಕ್ಷ ಟನ್ ಸಂಗ್ರಹ ಮಾಡಿದೆ.
ಈ ಪ್ರಮಾಣದಲ್ಲಿ ಈರುಳ್ಳಿ ಯಾವತ್ತೂ ಸಂಗ್ರಹ ಆಗಿರಲಿಲ್ಲ. ಹಬ್ಬಗಳ ಸಂಭ್ರಮದಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುತ್ತದೆ. ಇಂತಹ ಪರಿಸ್ಥಿತಿಗೆ ಬ್ರೇಕ್ ಹಾಕಲು ಸರ್ಕಾರ ಈ ಚಿಂತನೆ ನಡೆಸಿದೆ.