ಪೋಸ್ಟ್ ಆಫೀಸ್ ಸ್ಕೀಮ್; ನೀವು ಈ ಯೋಜನೆಗೆ ಸೇರಿದರೆ ತಿಂಗಳಿಗೆ 2 ಸಾವಿರ ರೂ!

ಪೋಸ್ಟ್ ಆಫೀಸ್ ವಿವಿಧ ರೀತಿಯ ಯೋಜನೆಗಳನ್ನು ನೀಡುತ್ತಿದ್ದು, ಇದರಲ್ಲಿ ಹಣ ಹೂಡಿಕೆ ಮಾಡುವುದರಿಂದ ಯಾವುದೇ ರಿಸ್ಕ್ ಇಲ್ಲದೆ ಲಾಭವನ್ನು ಪಡೆಯಬಹುದು. ನೀವು ಪಡೆಯುವ ಆದಾಯವು ನೀವು ಆಯ್ಕೆ ಮಾಡಿದ ಯೋಜನೆಯನ್ನು ಅವಲಂಬಿಸಿರುತ್ತದೆ. ಆದ್ದರಿಂದ ಮುಖ್ಯ…

post office scheme vijayaprabha

ಪೋಸ್ಟ್ ಆಫೀಸ್ ವಿವಿಧ ರೀತಿಯ ಯೋಜನೆಗಳನ್ನು ನೀಡುತ್ತಿದ್ದು, ಇದರಲ್ಲಿ ಹಣ ಹೂಡಿಕೆ ಮಾಡುವುದರಿಂದ ಯಾವುದೇ ರಿಸ್ಕ್ ಇಲ್ಲದೆ ಲಾಭವನ್ನು ಪಡೆಯಬಹುದು. ನೀವು ಪಡೆಯುವ ಆದಾಯವು ನೀವು ಆಯ್ಕೆ ಮಾಡಿದ ಯೋಜನೆಯನ್ನು ಅವಲಂಬಿಸಿರುತ್ತದೆ. ಆದ್ದರಿಂದ ಮುಖ್ಯ ವಿಷಯವೆಂದರೆ ನೀವು ಯಾವ ಸ್ಕೀಮ್ ಅನ್ನು ಆರಿಸುತ್ತೀರಿ ಎನ್ನುವುದು.

ಮಾಸಿಕ ಆದಾಯ ಯೋಜನೆ ಎಂಐಎಸ್ (Monthly Income Scheme) ಕೂಡ ಪೋಸ್ಟ್ ಆಫೀಸ್ ನೀಡುವ ಯೋಜನೆಗಳಲ್ಲಿ ಒಂದಾಗಿದೆ. ನೀವು ಈ ಯೋಜನೆಗೆ ಸೇರಿದರೆ, ನಿಮಗೆ ಪ್ರತಿ ತಿಂಗಳು ಹಣ ಸಿಗುತ್ತದೆ. ಒಂದು ನಿರ್ದಿಷ್ಟ ಮೊತ್ತವನ್ನು ಏಕಕಾಲದಲ್ಲಿ ಠೇವಣಿ ಇರಿಸಬೇಕು, ನಂತರ ಪ್ರತಿ ತಿಂಗಳು ಈ ಹಣದ ಮೇಲಿನ ಬಡ್ಡಿ ಬರುತ್ತಲೇ ಇರುತ್ತದೆ. ಈ ಯೋಜನೆಯಲ್ಲಿ ನೀವು ಹತ್ತು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳನ್ನು ಸಹ
ದಾಖಲಿಸಬಹುದು.

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ (MIS) ಗರಿಷ್ಠ 4.5 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಪ್ರಸ್ತುತ ಶೇಕಡಾ 6.6 ರಷ್ಟು ಬಡ್ಡಿ ಸಿಗುತ್ತದೆ. ಯೋಜನೆಯ ಮುಕ್ತಾಯ ಅವಧಿ 5 ವರ್ಷಗಳು. ನೀವು 2 ಲಕ್ಷ ರೂ. ಠೇವಣಿ ಮಾಡಿ, ಈ ಯೋಜನೆಗೆ ಸೇರಿದರೆ ನಿಮಗೆ ತಿಂಗಳಿಗೆ 1100 ರೂ. ಬರುತ್ತದೆ.

Vijayaprabha Mobile App free

ಅಂದರೆ ನೀವು ಐದು ವರ್ಷಗಳಲ್ಲಿ ಬಡ್ಡಿ 66,000 ರೂ.ವರೆಗೂ ಬಡ್ಡಿ ರೂಪದಲ್ಲಿ ಸಿಗುತ್ತದೆ. ಅದೇ ನೀವು 3.5 ಲಕ್ಷ ರೂ. ಠೇವಣಿ ಇಟ್ಟರೆ, ನಿಮಗೆ ತಿಂಗಳಿಗೆ ಸುಮಾರು 2 ಸಾವಿರ ರೂ. ಸಿಗುತ್ತದೆ. ಇತರ ಖರ್ಚುಗಳಿಗೆ ಬಳಸಿಕೊಳ್ಳಬಹುದು. ನೀವು ಅದೇ 4.5 ಲಕ್ಷ ರೂ.ಗಳನ್ನು ಹಾಕಿದರೆ, ನೀವು 2,500 ರೂ.ವರೆಗೂ ಗಳಿಸಬಹುದು

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.