ಬೆಂಗಳೂರು: ನಾಟಿ ಔಷಧಿಗೆ ಬಂದಿದ್ದ ಮಹಿಳೆಯನ್ನು ಹತ್ಯೆ ಮಾಡಿ ಸರ ಕಸಿದು ಪರಾರಿಯಾಗಿರುವ ಘಟನೆ ಬೆಂಗಳೂರಿನ ಯಲಹಂಕದ ಕಟ್ಟಿಗೇನಹಳ್ಳಿಯಲ್ಲಿ ನಡೆದಿದ್ದು, ಸಲೀಂ ಎಂಬಾತ ಚಿನ್ನದ ಸರಕ್ಕಾಗಿ ಸಿದ್ದಮ್ಮ ಎಂಬಾಕೆಯನ್ನು ಹತ್ಯೆಗೈದು ಪರಾರಿಯಾಗಿದ್ದಾನೆ.
ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಿದ್ದಮ್ಮ ಆರೋಪಿ ಸಲೀಂ ಬಳಿ ನಾಟಿ ಔಷಧಿ ತೆಗೆದುಕೊಳ್ಳುತ್ತಿದ್ದರು ಎನ್ನಲಾಗಿದ್ದು, ನಿನ್ನೆ ಔಷಧಿ ತೆಗೆದುಕೊಳ್ಳಲು ಹೋಗಿದ್ದ ವೇಳೆ ಸಲೀಂ ಕೊಲೆ ಮಾಡಿ ಚಿನ್ನದ ಸರ ಕದ್ದು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಯಲಹಂಕ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಬಿಹಾರ ಮೂಲದವನಾದ ಸಲೀಂ, ಕಳೆದ 20 ವರ್ಷದಿಂದ ಯಲಹಂಕದ ಕಟ್ಟಿಗೇನಹಳ್ಳಿಯಲ್ಲಿ ವಾಸವಿದ್ದ. ಊರಲ್ಲಿ ಗಾರೆ ಕೆಲಸ ಮಾಡಿಕೊಂಡು ಶುಗರ್ ಖಾಯಿಲೆಗೆ ನಾಟಿ ಔಷಧಿ ಕೊಡುತ್ತಿದ್ದ ಎನ್ನಲಾಗಿದೆ.