ನಿಮ್ಮಲ್ಲಿ ಗ್ಯಾಸ್ ಸಿಲಿಂಡರ್ ಇದೆಯೇ? ನೀವು ಇಂಡೇನ್ ಗ್ಯಾಸ್ ಗ್ರಾಹಕರಾಗಿದ್ದೀರಾ? ಅಗಾದರೆ ನೀವು ಖಚಿತವಾಗಿ ಒಂದು ವಿಷಯವನ್ನು ತಿಳಿದಿರಬೇಕು. ಇಂಡಿಯನ್ ಆಯಿಲ್ ತನ್ನ ಗ್ರಾಹಕರಿಗೆ ಅನೇಕ ರೀತಿಯ ಸೌಲಭ್ಯಗಳನ್ನು ನೀಡುತ್ತಿದ್ದು, ಡಾಕ್ ಸೇವೆಗಳು ಸಹ ಇದರ ಒಂದು ಭಾಗವಾಗಿದೆ.
ನೀವು ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡುವಾಗಲೆಲ್ಲಾ ಡಾಕ್ ಸಂಖ್ಯೆ ಜನರೇಟ್ ಆಗುತ್ತದೆ. ಈ ಸಂಖ್ಯೆಯಿಂದ ಸಾಕಷ್ಟು ಪ್ರಯೋಜನವಿದೆ. ನೀವು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಅನ್ನು ಮನೆಗೆ ಡೆಲಿವರಿ ಪಡೆಯಲು ಬಯಸಿದರೆ, ಈ ಸಂಖ್ಯೆಯನ್ನು ಹೇಳಬೇಕು. ಆಗ ಮಾತ್ರ ಡೆಲಿವರಿ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.
ಇಂಡಿಯನ್ ಆಯಿಲ್ ಕಂಪನಿ ತನ್ನ ಟ್ವಿಟ್ಟರ್ ಪ್ಲಾಟ್‌ಫಾರ್ಮ್‌ನಲ್ಲಿ ಈ ವಿಷಯವನ್ನು ಬಹಿರಂಗಪಡಿದ್ದು, ಇಂಡಿಯನ್ ಗ್ಯಾಸ್ ಬುಕ್ ಮಾಡಿದ ಪ್ರತಿ ಬಾರಿ ಡಾಕ್ ಜನರೇಟ್ ಆಗುತ್ತದೆ. ಈ ಸಂಖ್ಯೆಯನ್ನು ಡೆಲಿವರಿ ಹುಡುಗನಿಗೆ ತಿಳಿಸಿದರೆ ಡೆಲಿವರಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಎಂದು ತಿಳಿಸಿದೆ. ಡೆಲಿವರಿ ಅತಂಟಿಕೇಷನ್ ಕೋಡ್ ಅನ್ನು ಡ್ಯಾಕ್ ಎಂದು ಕರೆಯಲಾಗುತ್ತದೆ.
ನಿಮ್ಮ ಗ್ಯಾಸ್ ಸಿಲಿಂಡರ್ ಅನ್ನು ನೀವು ಬುಕ್ ಮಾಡಿದ ನಂತರ ನೀವು ಈ ಕೋಡ್ ಅನ್ನು SMS ರೂಪದಲ್ಲಿ ಸ್ವೀಕರಿಸುತ್ತೀರಿ. ಅಂದರೆ, ಒಟಿಪಿ ಮಾದರಿ ಎಂದು ಹೇಳಬಹುದು. ನೀವು ಈ ಕೋಡ್ ಅನ್ನು ಗ್ಯಾಸ್ ಸಿಲಿಂಡರ್ ಡೆಲಿವರಿ ಬಾಯ್ ಗೆ ಹೇಳಬೇಕು. ಇದು 4 ಅಂಕೆಗಳನ್ನು ಹೊಂದಿರುತ್ತದೆ. ಒಂದು ವೇಳೆ ಈ ಕೋಡ್ ಅನ್ನು ಹೇಳದಿದ್ದರೆ ಸಿಲಿಂಡರ್ ಲಭ್ಯವಿಲ್ಲದಿರಬಹುದು. ಬ್ಲಾಕ್ ಮಾರ್ಕೆಟಿಂಗ್ ತಡೆಯಲು ಕಂಪನಿಯು ಈ ನೀತಿಯನ್ನು ತಂದಿದೆ. ಆದರೂ ಹೆಚ್ಚಿನ ಪ್ರದೇಶಗಳಲ್ಲಿ ಡೆಲಿವರಿ ಹುಡುಗರು ಡಾಕ್ ಕೋಡ್ ಕೇಳುತ್ತಿಲ್ಲ. 30 ರೂ ಹಣವನ್ನು ಮಾತ್ರ ಪಡೆತುಕೊಳ್ಳುತ್ತಿದ್ದಾರೆ. ನಂತರ ಸಿಲಿಂಡರ್ ಅನ್ನು ತಲುಪಿಸುತ್ತಿದ್ದಾರೆ.
Did you know that a unique DAC is generated every time you book your #Indane refill? Share the DAC with the delivery personnel to complete the delivery process. Help us serve you better. #Indane #DAC #LPG pic.twitter.com/Am9IxgbVlI
— Indian Oil Corp Ltd (@IndianOilcl) April 24, 2021