ಡಿಜಿಟಲ್ ಲಾಕರ್ ಹಾಗೂ ಎಂಪರಿವಾಹನ್ ಯಾವುದಾದರೂ 1 ಆ್ಯಪ್ ಡೌನ್ಲೋಡ್ ಮಾಡಿಕೊಂಡು ಡಿಜಿಟಲ್ ದಾಖಲೆ ಇಟ್ಟುಕೊಳ್ಳಬಹುದಾಗಿದೆ.
ನೋಂದಣಿ ಪ್ರಮಾಣ ಪತ್ರ (ಆರ್.ಸಿ), ಚಾಲನ ಪರವಾನಗಿ (ಡಿಎಲ್), ಇನ್ಸುರೆನ್ಸ್, ಫಿಟ್ನೆಸ್ ಪ್ರಮಾಣಪತ್ರ ಹಾಗೂ ವಾಯುಮಾಲಿನ್ಯ ಪ್ರಮಾಣ ಪತ್ರ ಸೇರಿದಂತೆ ವಾಹನಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಇಡಬಹುದಾಗಿದೆ. ಸ್ಮಾರ್ಟ್ ಫೋನ್ ನಲ್ಲಿಯೇ ಎಲ್ಲ ದಾಖಲೆ ಸ್ಟೋರ್ ಮಾಡಿಕೊಡುವ ವ್ಯವಸ್ಥೆ ಇದಾಗಿದ್ದು, ಪೊಲೀಸರು ಕೇಳಿದಾಗ ಡಿಜಿ ಲಾಕರ್ ಆ್ಯಪ್ ಮೂಲಕ ತೋರಿಸಬಹುದಾಗಿದೆ.
ಡಿಜಿ ಲಾಕರ್ ಬಗ್ಗೆ ಮಾಹಿತಿ:
ವಾಹನ ಸವಾರರು ತಮ್ಮ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಇಟ್ಟುಕೊಳ್ಳಬಹುದಾದ ಆ್ಯಪ್ ಇದಾಗಿದ್ದು, ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ? ಎಂದು ನೋಡೋಣ.
ವಾಹನ ಸವಾರರು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಡಿಜಿ ಲಾಕರ್ ಎಂಬ ಆ್ಯಪ್ ಇನ್ಸ್ಟಾಲ್ ಮಾಡಿಕೊಂಡು ನಂತರ ಆ್ಯಪ್ ತೆರೆದು ಮೊಬೈಲ್ ಸಂಖ್ಯೆ ಬಳಸಿ ಲಾಗಿನ್ ಆಗಬೇಕು. ಆ ನಂತರ ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ ಬಳಿಕ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಆಯ್ಕೆ ಮಾಡಿಕೊಂಡ ನಿರ್ದಿಷ್ಟ ಹೆಸರಿನಲ್ಲಿ ದಾಖಲೆಗಳನ್ನು ಸೇವ್ ಮಾಡಿಕೊಳ್ಳಬಹುದು. ಇದರಿಂದ ವಾಹನ ಸವಾರರು ಪೊಲೀಸರಿಗೆ ದಾಖಲೆಗಳನ್ನು ಭೌತಿಕವಾಗಿ ತೋರಿಸಬೇಕಾದ ಅವಶ್ಯಕತೆ ಇರುವುದಿಲ್ಲ.