ಇಂದು ಮಕರ ಸಂಕ್ರಾಂತಿ; ಹಬ್ಬದ ಹಿನ್ನಲೆ, ಎಳ್ಳು, ಬೆಲ್ಲ ಹಾಗು ಕಬ್ಬಿನ ಮಹತ್ವ

ಮಕರ ಸಂಕ್ರಾಂತಿಯ ಹಿನ್ನೆಲೆ: ಮಕರ ಸಂಕ್ರಾಂತಿ ಹಬ್ಬವಾದ ಇಂದು ಎಳ್ಳು- ಬೆಲ್ಲ ತಿಂದು ಸಿಹಿಯಾದ ಮಾತುಗಳನ್ನಾಡುವ, ಎಳ್ಳು – ಬೆಲ್ಲ ಹಂಚಿ ಸಂತೋಷ ಪಡೆಯುವ ಹಬ್ಬವೇ ಸಂಕ್ರಾಂತಿ. ಪ್ರತಿವರ್ಷ ಜನವರಿ ತಿಂಗಳಲ್ಲಿ ಮಕರ ರಾಶಿ…

ಮಕರ ಸಂಕ್ರಾಂತಿಯ ಹಿನ್ನೆಲೆ:

ಮಕರ ಸಂಕ್ರಾಂತಿ ಹಬ್ಬವಾದ ಇಂದು ಎಳ್ಳು- ಬೆಲ್ಲ ತಿಂದು ಸಿಹಿಯಾದ ಮಾತುಗಳನ್ನಾಡುವ, ಎಳ್ಳು – ಬೆಲ್ಲ ಹಂಚಿ ಸಂತೋಷ ಪಡೆಯುವ ಹಬ್ಬವೇ ಸಂಕ್ರಾಂತಿ. ಪ್ರತಿವರ್ಷ ಜನವರಿ ತಿಂಗಳಲ್ಲಿ ಮಕರ ರಾಶಿ ಅಥವಾ ರಾಶಿ ಚಿಹ್ನೆ ಮಕರಕ್ಕೆ ಸೂರ್ಯನು ಪ್ರವೇಶಿಸಿದಾಗ ಅದನ್ನು ಮಕರ ಸಂಕ್ರಾಂತಿ ಎಂದು ಆಚರಣೆ ಮಾಡಲಾಗುತ್ತದೆ.

ಇದು ಮೂಲತಃ ಗುಜರಾತ್‌ನಿಂದ ಬಂದಿತ್ತೆನ್ನಲಾಗಿದ್ದರೂ ಇದನ್ನು ಪೊಂಗಲ್ ಅಥವಾ ಇನ್ನಿತರ ಹೆಸರುಗಳಿಂದ ಹಿಂದೂಗಳು ಮಾತ್ರವಲ್ಲ, ಸಿಖ್ಖರೂ ಕೂಡ ವೈವಿಧ್ಯತೆಯಿಂದ ದೇಶದ ವಿವಿಧ ರಾಜ್ಯಗಳಲ್ಲಿ ಆಚರಿಸುತ್ತಾರೆ.

Vijayaprabha Mobile App free

ಎಳ್ಳು, ಬೆಲ್ಲ, ಸಿಹಿ ಕಬ್ಬಿನ ಮಹತ್ವವೇನು?

ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಎಳ್ಳು, ಬೆಲ್ಲ, ಕಡಲೇಬೀಜಗಳಿಂದ ತಯಾರಿಸಿದ ಸಿಹಿ ಜೊತೆಗೆ ಕಬ್ಬನ್ನು ಹಂಚುತ್ತಾರೆ. ಎಳ್ಳು ದೇಹವನ್ನು ಪೋಷಿಸುತ್ತದೆ. ಬೆಲ್ಲವು ಪಚನಕ್ರಿಯೆಗೆ ನೆರವಾಗುವ ಖನಿಜಾಂಶಗಳಿಂದ ಕೂಡಿರುತ್ತದೆ.

ಕಬ್ಬು ಮನಸ್ಸಿನ ಮೂಲಕ ವ್ಯಕ್ತಿಯೋರ್ವನಲ್ಲಿ ಧನಾತ್ಮಕ ಆಲೋಚನೆಯ ಉಗಮವನ್ನು ಪ್ರತಿನಿಧಿಸುತ್ತದೆ.ಅಷ್ಟೇ ಅಲ್ಲದೇ ಬಂಧು-ಮಿತ್ರರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಉತ್ತಮಗೊಳಿಸುತ್ತದೆ. ಕಬ್ಬು ದುಷ್ಟಶಕ್ತಿಯ ವಿರುದ್ಧ ಶಿಷ್ಟಶಕ್ತಿಯ ವಿಜಯದ ತತ್ವ ಸಾರುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.