ಅನ್ನದಾತರಿಗೆ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಹ ರೈತರು ಪ್ರತಿವರ್ಷ ರೂ.6000 ಪಡೆಯಬಹುದು. ಈ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ಒಂದೇ ಬಾರಿಗೆ ಜಮಾ ಮಾಡದೆ ಮೂರು ಕಂತುಗಳಲ್ಲಿ 2000 ರೂ ಗಳಂತೆ ಜಮಾ ಮಾಡಲಾಗುತ್ತದೆ. ಈಗಾಗಲೇ 10 ಕಂತುಗಳ ಹಣ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಿದ್ದು, ಒಬ್ಬೊಬ್ಬ ರೈತರಿಗೂ ತಲಾ 20 ಸಾವಿರ ರೂ. ಬಂದಿದೆ ಎನ್ನಲಾಗಿದೆ.
ಇನ್ನು, ಮೋದಿ ಸರಕಾರ ರೈತರಿಗೆ 11ನೇ ಕಂತಿನ ಹಣ ನೀಡಲಿದೆ. ಈ 11ನೇ ಕಂತಿನ ಹಣ ಯಾವಾಗ ಬರುತ್ತದೆ ಎಂದು ಈಗ ತಿಳಿಯೋಣ. ಪ್ರತಿ ಹಣಕಾಸು ವರ್ಷದ ಮೊದಲ ಕಂತು ಏಪ್ರಿಲ್ 1 ರಿಂದ ಜುಲೈ 31 ರ ನಡುವೆ ರೈತರಿಗೆ ತಲುಪುತ್ತದೆ. ಯಾವಾಗ ಬೇಕಾದರೂ ಈ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು.
ಎರಡನೇ ಕಂತಿನ ಹಣವನ್ನು ಆಗಸ್ಟ್ 1 ರಿಂದ ನವೆಂಬರ್ 30 ರೊಳಗೆ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಇನ್ನು, ಮೂರನೇ ಕಂತಿನ ಹಣವನ್ನು ಡಿಸೆಂಬರ್ 1 ರಿಂದ ಮಾರ್ಚ್ 31 ರ ನಡುವೆ ಯಾವಾಗ ಬೇಕಾದರೂ ಜಮಾ ಮಾಡಬಹುದು. ಹೀಗಾಗಿ ಮೂರು ಕಂತುಗಳಲ್ಲಿ 2000 ರೂಗಳಂತೆ ರೈತರ ಬ್ಯಾಂಕ್ ಖಾತೆಗೆ ಪ್ರತಿವರ್ಷ 6 ಸಾವಿರ ಜಮಾ ಮಾಡಲಾಗುತ್ತಿದೆ. ಅಂದರೆ ಏಪ್ರಿಲ್ ತಿಂಗಳಿನಲ್ಲಿ 11ನೇ ಕಂತಿನ ಹಣ ಅನ್ನದಾತರಿಗೆ ತಲುಪಲಿದೆ ಎನ್ನಲಾಗಿದೆ.
ಈ ಯೋಜನೆಗೆ ಸೇರದೇ ಇರುವವರು ಇದ್ದರೆ, ಈಗಲಾದರೂ ಯೋಜನೆಗೆ ಸೇರಬಹುದು. ನೀವು ಯೋಜನೆಗೆ ಸೇರಲು ಬೇಕಾಗಿರುವುದು ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ ಮತ್ತು ಪಹಣಿ. ಮೊಬೈಲ್ ಸಂಖ್ಯೆಯನ್ನು ಆಧಾರಕ್ಕೆ ಲಿಂಕ್ ಮಾಡಬೇಕು. ಅರ್ಹ ರೈತರು ಪಿಎಂ ಕಿಸಾನ್ ವೆಬ್‌ಸೈಟ್ ಮೂಲಕ ಯೋಜನೆಗೆ ಸೇರಬಹುದು.
ಯೋಜನೆಗೆ ಸೇರಲು ಬಯಸುವವರು ಪಿಎಂ ಕಿಸಾನ್ ವೆಬ್‌ಸೈಟ್‌ಗೆ ಹೋಗಬೇಕು. ಬಲಭಾಗದಲ್ಲಿ ರೈತರ ಕಾರ್ನರ್ ಇರುತ್ತದೆ. ಹೊಸ ರೈತ ನೋಂದಣಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಈಗ ಹೊಸ ಪುಟ ತೆರೆದುಕೊಳ್ಳುತ್ತದೆ. ಇದರಲ್ಲಿ ನೀವು ಗ್ರಾಮೀಣ ರೈತ ನೋಂದಣಿ ಅಥವಾ ನಗರ ರೈತ ನೋಂದಣಿ ಎಂಬ ಆಯ್ಕೆಗಳಲ್ಲಿ ಒಂದನ್ನು ಆರಿಸಿಕೊಳ್ಳಬೇಕು. ನಂತರ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಮುಂತಾದ ವಿವಿಧ ವಿವರಗಳನ್ನು ನಮೂದಿಸಿ ಈ ಯೋಜನೆಗೆ ಸೇರಿಕೊಳ್ಳಿ.