ನವದೆಹಲಿ: ಭಾರತದ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ (35) ಅವರು ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 17ನೇ ವಯಸ್ಸಿನಲ್ಲಿ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯವನ್ನಾಡುವ ಮೂಲಕ ವೃತ್ತಿ ಜೀವನ ಆರಂಭಿಸಿದ್ದ ಪಾರ್ಥಿವ್, ಕಿರಿಯ ವಿಕೆಟ್ ಕೀಪರ್ ಎಂಬ ದಾಖಲೆ ಹೊಂದಿದ್ದಾರೆ. ಇನ್ನು ಐಪಿಎಲ್ ನಲ್ಲಿ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿ ಗಮನ ಸೆಳೆದಿದ್ದರು.
ಪಾರ್ಥಿವ್ ಪಟೇಲ್ ಅವರು ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಒಟ್ಟು 25 ಟೆಸ್ಟ್, 38 ಏಕದಿನ & 2 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 25 ಟೆಸ್ಟ್ ಪಂದ್ಯಗಳಿಂದ 934 ರನ್ ಬಾರಿಸಿದ್ದು, 6 ಅರ್ಧಶತಕಗಳನ್ನು ಗಳಿಸಿದ್ದಾರೆ. 38 ಏಕದಿನ ಪಂದ್ಯಗಳಿಂದ 736 ರನ್ ಗಳಿಸಿದ್ದು, ಇದರಲ್ಲಿ 4 ಅರ್ಧ ಶತಕ ಗಳಿಸಿದ್ದಾರೆ. 2 ಟಿ20 ಪಂದ್ಯಗಳಿಂದ 36 ರನ್ ಗಳಿಸಿದ್ದಾರೆ.
ಪಾರ್ಥಿವ್ ಪಟೇಲ್ ಅವರು ಗುಜರಾತ್ ಪರ 194 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 2017ರ ರಣಜಿ ಟ್ರೋಫಿಯಲ್ಲಿ ಗುಜರಾತ್ ತಂಡದ ನಾಯಕತ್ವ ವಹಿಸಿದ್ದರು. ಇನ್ನು 139 ಐಪಿಎಲ್ ಪಂದ್ಯಗಳನ್ನಾಡಿದ್ದು 2848 ರನ್ ಗಳಿಸಿದ್ದು, 13 ಅರ್ಧ ಶತಕ ಬಾರಿಸಿದ್ದಾರೆ.