ಸ್ಪೋರ್ಟ್ಸ್ ಡೆಸ್ಕ್ (Sports Updates): ಕ್ರಿಕೆಟ್ ಲೋಕದಿಂದ ಮತ್ತೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದ್ದು, ಟೀಂ ಇಂಡಿಯಾ (Team India) ಹಾಗೂ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಸ್ಟಾರ್ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದ ರಾಹುಲ್ ಚಾಹರ್ (Rahul Chahar) ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ.
ಹೌದು, ತಮ್ಮ ಪತ್ನಿ ಇಶಾನಿ ಅವರಿಂದ ಅಧಿಕೃತವಾಗಿ ವಿಚ್ಛೇದನ (Divorce) ಪಡೆದಿರುವುದಾಗಿ ರಾಹುಲ್ ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದ್ದು, ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.
ಇದನ್ನೂ ಓದಿ: Breaking: ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲೇ RCB ಪಂದ್ಯಗಳು; ಸರ್ಕಾರದಿಂದ ಗ್ರೀನ್ ಸಿಗ್ನಲ್!
4ನೇ ವಾರ್ಷಿಕೋತ್ಸವಕ್ಕೂ ಮುನ್ನವೇ ದಾಂಪತ್ಯ ಅಂತ್ಯ!

2022ರಲ್ಲಿ ತಮ್ಮ ಬಹುಕಾಲದ ಗೆಳತಿ ಇಶಾನಿ ಅವರೊಂದಿಗೆ ಸ್ಟಾರ್ ಕ್ರಿಕೆಟರ್ ರಾಹುಲ್ ಚಾಹರ್ ಅದ್ದೂರಿಯಾಗಿ ಹಸೆಮಣೆ ಏರಿದ್ದರು. ಆದರೆ, ಮದುವೆಯಾದ ಕೆಲವೇ ವರ್ಷಗಳಲ್ಲಿ ಇಬ್ಬರ ನಡುವೆ ಬಿರುಕು ಮೂಡಿದ್ದು, ತಮ್ಮ 4ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ಮುನ್ನವೇ ಈ ಜೋಡಿ ಕಾನೂನುಬದ್ಧವಾಗಿ ಬೇರೆಯಾಗಿದೆ.
ಇದನ್ನೂ ಓದಿ: Toxic Teaser Released: ಗುಂಡಿನ ಸದ್ದು, ರಕ್ತದೋಕುಳಿ.. ಯಶ್ ‘ಟಾಕ್ಸಿಕ್’ ಟೀಸರ್ ನೋಡಿ ಫ್ಯಾನ್ಸ್ ಫಿದಾ!
15 ತಿಂಗಳ ಕೋರ್ಟ್ ಅಲೆದಾಟ:
ಕಳೆದ 15 ತಿಂಗಳಿನಿಂದ ಈ ದಂಪತಿ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿ, ಸುದೀರ್ಘ ಕಾನೂನು ಪ್ರಕ್ರಿಯೆಗಳನ್ನು ಎದುರಿಸಿದ್ದದ್ದು, ಅಂತಿಮವಾಗಿ ನ್ಯಾಯಾಲಯ ಇಬ್ಬರಿಗೂ ವಿಚ್ಛೇದನ ಮಂಜೂರು ಮಾಡಿದೆ.
ಇನ್ಸ್ಟಾಗ್ರಾಮ್‌ನಲ್ಲಿ ಭಾವುಕ ಪೋಸ್ಟ್:
ಇನ್ನು, ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್ ಚಾಹರ್, “ಇಂದು ನಮ್ಮ ಜೀವನದ ಒಂದು ಪ್ರಮುಖ ಅಧ್ಯಾಯ ಮುಕ್ತಾಯಗೊಳ್ಳುತ್ತಿದ್ದು, ಸುದೀರ್ಘ ಪ್ರಕ್ರಿಯೆಯ ಬಳಿಕ ನಾವು ಬೇರೆಯಾಗುತ್ತಿದ್ದೇವೆ” ಎಂದು ಬರೆದುಕೊಂಡಿದ್ದಾರೆ. ಟೀಂ ಇಂಡಿಯಾದ ಭರವಸೆಯ ಆಟಗಾರನ ಬಾಳಲ್ಲಿ ನಡೆದಿರುವ ಈ ದಿಢೀರ್ ಬೆಳವಣಿಗೆ ಕ್ರಿಕೆಟ್ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.
View this post on Instagram




