2021-22 ಅವಧಿಯ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ನಿನ್ನೆ (ಜುಲೈ 31) ಕೊನೆಯ ದಿನವಾಗಿದ್ದು, ಲಕ್ಷಾಂತರ ತೆರಿಗೆ ಪಾವತಿದಾರರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಮುಗಿಬಿದ್ದಿದ್ದಾರೆ.
ಹೌದು, 2021-22 ಅವಧಿಯ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿತ್ತು. ಅಂತಿಮ ದಿನ 64 ಲಕ್ಷ ಜನರು ಆದಾಯ ತೆರಿಗೆ ಫೈಲ್ ಮಾಡಿದ್ದಾರೆ ಎಂದು ಐಟಿ ಇಲಾಖೆ ತಿಳಿಸಿದೆ. ಜುಲೈ 30ರ ತನಕ 5.1 ಕೋಟಿ ಜನರು ಐಟಿ ಫೈಲ್ ಮಾಡಿದ್ದರು. ಅಂತಿಮ ದಿನ 63,47,054 ಮಂದಿ ರಿಟರ್ನ್ಸ್ ಸಲ್ಲಿಸಿದ್ದಾರೆ. ಅದರಲ್ಲೂ ಅಂತಿಮ 1 ಗಂಟೆಯಲ್ಲಿ 4.60 ಲಕ್ಷ ಜನರು ಐಟಿ ಫೈಲ್ ಮಾಡಿದ್ದಾರೆ.
ಇನ್ನು, ಇಂದಿನಿಂದ ಐಟಿ ಫೈಲ್ ಮಾಡಲು ಅವಕಾಶವಿದ್ದರೂ ದಂಡ ಕಟ್ಟಬೇಕಾಗಿರುತ್ತದೆ. ಪಾವತಿಸದ ತೆರಿಗೆಗೆ 2% ಬಡ್ಡಿ ಆಗಸ್ಟ್‌ನಿಂದ ಅನ್ವಯವಾಗಲಿದ್ದು, ರೂ.5 ಲಕ್ಷದೊಳಗೆ ವಾರ್ಷಿಕ ಆದಾಯವಿದ್ದರೆ ರೂ.1 ಸಾವಿರ ಲೇಟ್ ಫೀಜು, ರೂ.5 ಲಕ್ಷಕ್ಕಿಂತ ಮೇಲೆ ಆದಾಯವಿದ್ದರೆ 5 ಸಾವಿರ ರೂಪಾಯಿ ಲೇಟ್ ಫೀಜು ದಂಡ ವಿಧಿಸಲಾಗುತ್ತದೆ.