ಸಿರಿಗೆರೆ: ಸಿರಿಗೆರೆ ಶ್ರೀಮಠದ ಚಾರಿತ್ರಿಕ ಹಿನ್ನೆಲೆಯಲ್ಲಿ ನಡೆದುಕೊಂಡು ಬಂದಿರುವ ಭಾವೈಕ್ಯತಾ ತರಳಬಾಳು ಹುಣ್ಣಿಮೆ ಮಹೋತ್ಸವ ತಾತಿ-ಮತ-ಪಂಥಗಳ ಚೌಕಟ್ಟನ್ನು ಮೀರಿ ನಾಡ ಜನರ ಒಳಿತಿಗಾಗಿ ಭಾವೈಕ್ಯತಾ ಸಾಧನವನ್ನಾಗಿ ರೂಪಿಸಿದವರು 20ನೆಯ ತರಳಬಾಳು ಜಗದ್ಗುರು ಲಿಂ.ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು, ನಾಡಿನ ಒಳ ಹೊರಗೆ ಯಶಸ್ವಿಯಾಗಿ ನಡೆದುಕೊಂಡು ಬಂದಿರುವ ಪ್ರಮುಖ ಧಾರ್ಮಿಕ ಸಮಾರಂಭಗಳಿಗೆ ಮಾತೃ ಸ್ವರೂಪದಂತಿರುವ ತರಳಬಾಳು ಹುಣ್ಣಿಮೆ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರಿಂದ ಹೊಸ ಆಯಾಮವನ್ನು ಪಡೆದು ಈ ಬಾರಿ ಫೆ.14 ರಿಂದ 16ರವರೆಗೆ ಸಿರಿಗೆರೆಯಲ್ಲಿ ತರಳಬಾಳು ಹುಣ್ಣಿಮೆ ಕಾರ್ಯಕ್ರಮ ನೆರವೇರಲಿದೆ.
ಫೆ.14ರ ಸೋಮವಾರ ಬೆಳಗ್ಗೆ 11ಕ್ಕೆ ವಿಚಾರ ಗೋಷ್ಠಿ-ಕನ್ನಡ ಸಾಹಿತ್ಯ
ಸ್ಥಳ ಗುರುಶಾಂತೇಶ್ವರ ದಾಸೋಹ ಮಂಟಪ : ವಿಚಾರ ಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಮಂಕುತಿಮ್ಮನ ಕಗ್ಗದಲ್ಲಿ ಜೀವನ ಮೌಲ್ಯಗಳು, ಶಿವಮೊಗ್ಗದ ಪ್ರವಚನಕಾರರಾದ ಜಿ.ಎಸ್.ನಟೇಶ್ ಹಾಗೂ ದಾವಣಗೆರೆಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ವ್ಯಂಗ ಚಿತ್ರಕಾರ ಎಚ್.ಬಿ.ಮಂಜುನಾಥ್ ಜೀವನೋತ್ಸವಕ್ಕಾಗಿ ಹಾಸ್ಯ ವಿಷಯ ಮಂಡಿಸುವರು.
ಸಂಜೆ 6:30ಕ್ಕೆ ಸಭಾ ಕಾರ್ಯಕ್ರಮ :
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾದ ಕೆ.ಎಸ್.ಈಶ್ವರಪ್ಪ, ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಬಸವರಾಜ್, ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್‌ಕುಮಾರ್ ಹಾಗೂ ವಿಶೇಷ ಆಹ್ವಾನಿತರಾಗಿ ದಾವಣಗೆರೆ ಜಿಲಾಧಿಕಾರಿ ಮಹಂತೇಶ್ ಬೀಳಗಿ, ಚಿತ್ರದುರ್ಗ ಜಿಲ್ಲಾಧಿಕಾರಿ ಕವಿತ ಎಸ್.ಮನ್ನೀಕೇರಿ ಭಾಗವಹಿಸಲಿದ್ದು,. ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬಿ.ವಾಮದೇವಪ್ಪ ಮತ್ತು ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಅವರನ್ನು ಸನ್ಮಾನಿಸುವರು.
ಸಾಂಸ್ಕೃತಿಕ ಕಾರ‌್ಯಕ್ರಮ :
ಬೇಲೂರು ನೃತ್ಯಾಂಜಲಿ ಕಲಾ ನಿಕೇತನ ಅವರಿಂದ ಭರತ ನಾಟ್ಯಂ, ಕುಟುಟದ ನಾಗರಾಜ್ ಮತ್ತು ತಂಡದಿಂದ ಯಕ್ಷಗಾನ, ಕಲ್ಬುರ್ಗಿ ಗೀತಗಾಯನದಿಂದ ಎದೆತುಂಬಿ ಹಾಡುವೆನು ಸಾಂಸ್ಕೃತಿಕ ಕಾರ್ಯಕ್ರಮವಿರಲಿದ್ದು, ತರಳಬಾಳು ಕಲಾಸಂಘದಿಂದ ಮಲ್ಲಕಂಬ, ಜಡೆಕೋಲಾಟ, ಲಂಬಾಣಿ ನೃತ್ಯ, ವಚನ ನೃತ್ಯ, ಜನಪದ ನೃತ್ಯ, ಒನಕೆ ಓಬವ್ವ, ಕೀಲುಕುದುರೆ ಗಾರುಡಿ ಗೊಂಬೆ ಹಾಗೂ ಡೊಳ್ಳು ಕುಣಿತ ಪ್ರದರ್ಶಿಸುವರು.
ಫೆ.15ರ ಮಂಗಳವಾರ ಬೆಳಗ್ಗೆ 11ಕ್ಕೆ: ವಿಚಾರ ಗೋಷ್ಠಿ-ವಿಜ್ಞಾನ ವಿಸ್ಮಯ
ಧಾರವಾಡ ಉನ್ನತ ಶಿಕ್ಷಣ ಅಕಾಡೆಮಿಯ ನಿರ್ದೇಶಕ ಎಂ.ಎಸ್.ಶಿವಪ್ರಸಾದ್ ಅವರಿಂದ ವಿಜ್ಞಾನ ಕಲಿಕೆಯ ವಿಸ್ಮಯ, ರಾಜ್ಯ ವಿಜ್ಞಾನ ಪರಿಷತ್ ಕಾರ್ಯಕಾರಿ ಸದಸ್ಯ ಎಚ್.ಎಸ್.ಟಿ. ಸ್ವಾಮಿ ಅವರಿಂದ ಖಗೋಳ ಕೌತುಕ ಹಾಗೂ ಧಾರವಾಡ ಸಂಪನ್ಮೂಲ ವ್ಯಕ್ತಿ ಮಹೇಶ್ ಮಾಸಾಳ್ ವಿಜ್ಞಾನ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ ವಿಷಯದ ಬಗ್ಗೆ ಉಪನ್ಯಾಸ ನೀಡುವರು.
ಸಂಜೆ 6:30ರ ಸಭಾ ಕಾರ್ಯಕ್ರಮ
ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ಪಿಟೀಲು ವಾದನ ಜರುಗಲಿದ್ದು, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಗೌಡ ಹಾಗೂ ಶಾಸಕರಾದ ಎಸ್.ಎ.ರವೀಂದ್ರನಾಥ್, ಕೆ.ಮಾಡಾಳ್ ವಿರುಪಾಕ್ಷಪ್ಪ, ಎಂ.ಚಂದ್ರಪ್ಪ, ಎಸ್.ವಿ.ರಾಮಚಂದ್ರಪ್ಪ, ಅಮೃತ ದೇಸಾಯಿ, ಎಸ್.ರುದ್ರೇಗೌಡ ಎನ್.ರವಿಕುಮಾರ್ ಭಾಗವಹಿಸುವರು.
ಸಾಂಸ್ಕೃತಿಕ ಕಾರ್ಯಕ್ರಮ :
ಅಂತಾರಾಷ್ಟೀಯ ಕಲಾವಿದರಿಂದ ಭರತನಾಟ್ಯಂ, ಉತ್ತರ ಪ್ರದೇಶದ ವಿಷ್ಣುಪ್ರಿಯ ಗೋಸ್ವಾಮಿ ಬೃಂದಾವನ ಅವರಿಂದ ಒಡಸ್ಸಿ ನೃತ್ಯ, ಹಾವೇರಿಯ ಗೊಟಗೋಡಿ ಕಲಾವಿದರಿಂದ ವೀರ ಅಭಿಮನ್ಯುವಿನ ವಧೆ ದೊಡ್ಡಾಟ ಕಾರ್ಯಕ್ರಮ ಹಾಗೂ ತರಳಬಾಳು ಕಲಾಸಂಘದವರಿಂದ ಮಲ್ಲಿಹಗ್ಗ, ನಗಾರಿ, ಬೀಸು ಕಂಸಾಳೆ ಪ್ರದರ್ಶನ ನಡೆಯಲಿದೆ.
ಫೆ.16ರ ಮಂಗಳವಾರ : ವಿಚಾರ ಗೋಷ್ಠಿ-ವ್ಯಕ್ತಿತ್ವ ವಿಕಸನ
ಬೆಳಗ್ಗೆ 11ಕ್ಕೆ ಮೈಸೂರಿನ ವಿಕಸನ ತರಬೇತುದಾರ ಡಾ.ಆರ್.ಎ.ಚೇತನ್ ರಾಮ್ ಅವರಿಂದ ವ್ಯಕ್ತಿತ್ವ ವಿಕಸನ ಮತ್ತು ಶಿಕಾರಿಪುರ ಸಾಧನಾ ಅಕಾಡೆಮಿ ಸಂಸ್ಥಾಪಕ ಬಿ.ಮಂಜುನಾಥ್ ಅವರಿಂದ ಪಿಯುಸಿ ನಂತರ ಮುಂದೇನು ಉಪನ್ಯಾಸ ನೀಡುವರು.
ಸಂಜೆ 6:30ರ ಸಭಾ ಕಾರ್ಯಕ್ರಮದಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರಿಂದ ಸದ್ಧರ್ಮ ಸಿಂಹಾಸನಾರೋಹಣ ನೆರವೇರಲಿದ್ದು, ಕರ್ನಾಟಕ ಸರ್ಕಾರ ಮುಖ್ಯಮಂತ್ರಿ ಶರಣ ಬಸವರಾಜ ಬೊಮ್ಮಾಯಿ ಅವರು ಉಪಸ್ಥಿತಿ ವಹಿಸುವರು
ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಚಿತ್ರದುರ್ಗ ಉಸ್ತಿವಾರಿ ಸಚಿವ ಬಿ.ಸಿ.ಪಾಟೀಲ್, ಸಣ್ಣ ನೀರಾವರಿ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ, ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ನಾರಾಯಣಸ್ವಾಮಿ, ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ್, ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ ಭಾಗವಹಿಸಿವರು.
ಬೆಂಗಳೂರು ಸಂಯೋಜಕ ರಘುನಂದನ್ ಅವರು ಪ್ರಜ್ಞಾಪ್ರವಾಹ ಆಧುನಿಕ ಶಿಕ್ಷಣದ ಜೊತೆಯಲ್ಲಿ ಧಾರ್ಮಿಕ ಶಿಕ್ಷಣದ ಅಗತ್ಯತೆ ಹಾಗೂ ವಿಶ್ವಬಂಧು ಮರುಳಸಿದ್ಧನ ಪರಂಪರೆ ವಿಷಯದ ಬಗ್ಗೆ ಉಪನ್ಯಾಸ ನೀಡುವರು.
ಇನ್ನು, ತರಳಬಾಳು ಕಲಾಸಂಘದಿಂದ ಮಲ್ಲಕಂಬ, ಮಲ್ಲಿಹಗ್ಗ, ಹಾಗೂ ರೂಪಕ ಶಿವಶರಣ ಹರಳಯ್ಯ ಪ್ರದರ್ಶಿಸುವರು.