ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆಯ(ಇಪಿಎಫ್‍ಒ) ನಿಯಮಗಳಲ್ಲಿ ಬದಲಾವಣೆಯಾಗಲಿದ್ದು, ಸ್ವಯಂ ಉದ್ಯೋಗಿಗಳನ್ನೂ ಇಪಿಎಫ್‍ಒ ವ್ಯಾಪ್ತಿಗೆ ತರಲಾಗುವುದು ಎಂದು ಮೂಲಗಳು ಹೇಳಿವೆ.
ಹೌದು, ಸ್ವಯಂ ಉದ್ಯೋಗಿಗಳನ್ನೂ ಇಪಿಎಫ್‍ಒ ವ್ಯಾಪ್ತಿಗೆ ತರಲು ರಾಜ್ಯಗಳೊಂದಿಗೆ ಮಾತುಕತೆ ನಡೆದಿದ್ದು, ಇದು ಸಾಧ್ಯವಾದರೆ ಸ್ವಯಂ ಉದ್ಯೋಗಿಗಳೂ ಇಪಿಎಫ್‍ಒ ಪಡೆಯಲಿದ್ದಾರೆ. ಪ್ರಸ್ತುತ ಇಪಿಎಫ್‍ಒ ಪಿಂಚಣಿ ಯೋಜನೆಗೆ ಸೇರಲು ಉದ್ಯೋಗಿಯು ಔಪಚಾರಿಕ ವಲಯದ ಕಂಪನಿಯಲ್ಲಿರಬೇಕು. ಆ ಕಂಪನಿ ಕನಿಷ್ಠ 20 ಮಂದಿ ಉದ್ಯೋಗಿಗಳನ್ನು ಹೊಂದಿರಬೇಕು ಎಂಬ ನಿಯಮಗಳಿವೆ.
ಒಂದೊಮ್ಮೆ ನಿಯಮ ಬದಲಾದರೆ, ಔಪಚಾರಿಕ ವಲಯದ ಎಲ್ಲ ಉದ್ಯೋಗಿಗಳಂತೆ ಸ್ವಯಂ ಉದ್ಯೋಗಿಗಳು ಕೂಡ ನಿವೃತ್ತಿ ಪಿಂಚಣಿ ವ್ಯಾಪ್ತಿಗೆ ಬರಲಿದ್ದು, ಇವರು ಕೂಡ ಪಿಂಚಣಿ ಪಡೆಯಬಹುದು.