ಬೆಂಗಳೂರು: ಜೆಡಿಎಸ್ನಲ್ಲಿ ಟಿಕೆಟ್ ಫೈಟ್ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆಯುತ್ತಿದೆ. ನಿನ್ನೆ HD ರೇವಣ್ಣ ಕುಟುಂಬ ರಾಜಕಾರಣದ ಭಿನ್ನಮತ ಸ್ಫೋಟಕ್ಕೆ ತೆರೆ ಎಳೆದಿದ್ದರು. ಆದರೆ ಭವಾನಿಗೆ ಟಿಕೆಟ್ ಕೊಡುವ ವಿಚಾರದ ಹೊಗೆ ಸದ್ಯ ಶಮನಗೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ. ಏಕೆಂದರೆ ಪುತ್ರ ಸೂರಜ್ ರೇವಣ್ಣ ಫೇಸ್ಬುಕ್ನಲ್ಲಿ ಚಿಕ್ಕಪ್ಪ ಕುಮಾರಸ್ವಾಮಿಗೆ ಟಾಂಗ್ ನೀಡುವ ಪೋಸ್ಟ್ ಹಾಕಿದ್ದಾರೆ.
ಎಂಎಲ್ಸಿ ಡಾ. ಸೂರಜ್ ರೇವಣ್ಣ ಟ್ವೀಟ್ ಮೇಲೆ ಟ್ವೀಟ್ ಮಾಡಿದ್ದು, ‘ಕಾಣದ ಕೈಗಳು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದರೂ, ಕಾಣುವ ಬುದ್ಧಿ ನಮ್ಮದಾಗಿರಲಿ, ಇವರೇ ನನ್ನ ಪ್ರಪಂಚ’ ಕೇಳಿದ್ದು ಸುಳ್ಳಾಗಬಹುದು. ನೋಡಿದ್ದು ಸುಳ್ಳಾಗಬಹುದು. ನಿಧಾನಿಸಿ ಯೋಚಿಸಿದಾಗ ನಿಜವು ತಿಳಿಯುವುದು ಎಂದು ಎಂದು ಸೂರಜ್ ಬರೆದುಕೊಂಡಿದ್ದಾರೆ. ಸೂರಜ್ ಪೋಸ್ಟ್ ರಾಜಕೀಯದಲ್ಲಿ ಚರ್ಚೆಯಾಗುತ್ತಿದೆ.
ಕೇಳಿದ್ದು ಸುಳ್ಳಾಗಬಹುದು.
ನೋಡಿದ್ದು ಸುಳ್ಳಾಗಬಹುದು.
ನಿಧಾನಿಸೀ ಯೋಚಿಸಿದಾಗ ನಿಜವು ತಿಳಿಯುವುದು .. pic.twitter.com/boODlL5MLS— Dr,Suraj Revanna MLC (@SurajMlc) January 29, 2023