ಅಬುದಾಬಿ: ಶೇಖ್ ಜಾಯೆದ್ ಕ್ರೀಡಾಂಗದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಸನ್ ರೈಸರ್ಸ್ ತಂಡ 15 ರನ್ ಗಳ ಗೆಲುವು ದಾಖಲಿಸಿದೆ.
ಸನ್ ರೈಸರ್ಸ್ ಹೈದರಾಬಾದ್ ತಂಡ ನೀಡಿದ 163 ರನ್ ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಶಿಖರ್ ಧವನ್ (34 ರನ್, 31 ಎಸೆತ), ಶ್ರೇಯಸ್ ಅಯ್ಯರ್ (17 ರನ್, 21 ಎಸೆತ), ರಿಷಬ್ ಪಂತ್ (28 ರನ್, 27ಎಸೆತ) ಅವರ ಆಟದ ನೆರವಿನಿಂದ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 147 ರನ್ ಗಳಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 15 ರನ್ ಗಳ ಸೋಲನುಭವಿಸಿತು. ಸನ್ ರೈಸರ್ಸ್ ತಂಡದ ಪರ ಉಸಿರು ರಶೀದ್ ಖಾನ್ 3, ಭುವನೇಶ್ವರ್ ಕುಮಾರ್ 2, ಖಲೀಲ್ ಅಹಮದ್, ನಟರಾಜನ್ ತಲಾ ವಿಕೆಟ್ ಪಡೆದು ಪಡೆದರು.
ಇನ್ನು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ತಂಡ ನಾಯಕ ಡೇವಿಡ್ ವಾರ್ನರ್ ( 45 ರನ್, 33 ಎಸೆತ), ಜಾನಿ ಬೈಸ್ಟ್ರೋ ( 53 ರನ್ 48 ಎಸೆತ ) ಕೇನ್ ವಿಲಿಯಮ್ಸನ್ (41 ರನ್, 26 ಎಸೆತ) ಅವರ ಆಟದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿತು. ಡೆಲ್ಲಿ ಕ್ಯಾಪಿಟಲ್ಸ್ ಪರ ರಬಾಡ, ಅಮಿತ್ ಮಿಶ್ರ ತಲಾ 2 ವಿಕೆಟ್ ಪಡೆದರು.
ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ 4 ಓವರ್ ಗಳಲ್ಲಿ 14 ರನ್ ನೀಡಿ 3 ವಿಕೆಟ್ ಪಡೆದು ತಂಡದ ಗೆಲುವಿಗೆ ಪ್ರಮುಖ ಕಾರಣರಾದ ರಶೀದ್ ಖಾನ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.
ಇದನ್ನು ಓದಿ: ಸೋನು ಸೂದ್ ಗೆ ವಿಶ್ವಸಂಸ್ಥೆ ಗೌರವ; ಪ್ರತಿಷ್ಠಿತ ಪ್ರಶಸ್ತಿ ಪಡೆದು, ದಿಗ್ಗಜರ ಸಾಲಿನಲ್ಲಿ ನಿಂತ ಸೋನು ಸೂದ್…!




