ದುಬೈ : ಐಪಿಎಲ್ 2020 ರ 13 ಆವೃತ್ತಿಯಲ್ಲಿ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ 40ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ರಾಜಸ್ತಾನ್ ರಾಯಲ್ಸ್ ವಿರುದ್ಧ 8 ವಿಕೆಟ್ ಗಳ ಜಯ ಸಾಧಿಸಿದೆ.
ರಾಜಸ್ತಾನ್ ರಾಯಾಲ್ಸ್ ನೀಡಿದ್ದ 155 ರನ್‍ಗಳ ಗುರಿ ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್ ತಂಡ 18.1 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 156 ರನ್ ಗಳಿಸಿ 8 ವಿಕೆಟ್ ಗಳ ಗೆಲುವು ಸಾಧಿಸಿತು. ಸನ್ ರೈಸರ್ಸ್ ಪರ ಜಾನಿ ಬೈರ್ಸ್ಟ್ರೋ(10), ಮನೀಶ್ ಪಾಂಡೆ(83*), ವಿಜಯ್ ಶಂಕರ್ (52*) ರನ್ ಗಳುಸಿ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು. ರಾಜಸ್ತಾನ್ ಪರ ಜೊಫ್ರಾ ಆರ್ಚರ್ 2 ವಿಕೆಟ್ ಪಡೆದರು.
ಇದಕ್ಕೂ ಮುಂಚೆ ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಜಸ್ತಾನ್ ರಾಯಲ್ಸ್ ತಂಡ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ (19) ಬೆನ್ ಸ್ಟೋಕ್ಸ್ (30), ಸಂಜು ಸ್ಯಾಮ್ಸನ್ (36) ಸ್ಟಿವನ್ ಸ್ಮಿತ್ (19), ರಿಯಾನ್ ಪರಾಗ್ (20) ಹಾಗು ಜೊಫ್ರಾ ಆರ್ಚರ್ (16) ರನ್ ಗಳ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 154 ರನ್ ಗಳಿಸಿತು. ಸನ್ ರೈಸರ್ಸ್ ಹೈದರಾಬಾದ್ ಪರ, ಜೇಸನ್ ಹೋಲ್ಡರ್ 3 ವಿಕೆಟ್, ರಶೀದ್ ಖಾನ್, ವಿಜಯ್ ಶಂಕರ್ ತಲಾ 1 ವಿಕೆಟ್ ಪಡೆದರು.
ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಮನೀಶ್ ಪಾಂಡೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.
ಇದನ್ನು ಓದಿ: ಅಪ್ಪ, ತಾತನ ಹೆಸರು ಹೇಳಿ ರಾಜಕೀಯ ಮಾಡುತ್ತಿದ್ದವರು ನಿರುದ್ಯೋಗಿಗಳಾಗಿದ್ದಾರೆ: ತೇಜಸ್ವಿ ಸೂರ್ಯ