ಶಾರ್ಜಾ : ಐಪಿಎಲ್ 2020 ರ 13 ಆವೃತ್ತಿಯಲ್ಲಿ ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ 52 ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ದ 5 ವಿಕೆಟ್ ಗಳ ಗೆಲುವು ದಾಖಲಿಸಿದೆ.
121 ರನ್ ಸಾದಾರಣ ಗುರಿಯನ್ನು ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್ ತಂಡ 14.1 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 121 ರನ್ ಗಳಿಸಿ 5 ವಿಕೆಟ್ ಗಳ ಗೆಲುವು ದಾಖಲಿಸಿತು. ಸನ್ ರೈಸರ್ಸ್ ಪರ ಆರಂಭಿಕ ಆಟಗಾರರಾದ ವೃದ್ಧಿಮಾನ್ ಸಹಾ -39, ಮನೀಶ್ ಪಾಂಡೆ-26 ಹಾಗು ಹೋಲ್ಡರ್-26* ರನ್ ಗಳಿಸಿದರು. ಆರ್ ಸಿಬಿ ಪರ ಯಜುವೇಂದ್ರ ಚಾಹಲ್ 2 ವಿಕೆಟ್, ಸೈನಿ, ಸುಂದರ್ ಹಾಗು ಉಡಾನ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೂ ಮುಂಚೆ ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 120 ರನ್ ಗಳ ಸಾದಾರಣ ಮೊತ್ತವನ್ನು ಕಲೆಹಾಕಿತು. ಆರ್ ಸಿಬಿ ಪರ ಜೋಷ್ ಫಿಲಿಪ್ಸ್-32, ಡಿವಿಲಿಯರ್ಸ್-24, ಹಾಗು ಸುಂದರ್-21 ರನ್ ಗಳಿಸಿದರು. ಸನ್ ರೈಸರ್ಸ್ ಪರ ಅದ್ಬುತ ಬೌಲಿಂಗ್ ಪ್ರದರ್ಶನ ನೀಡಿದ ಸಂದೀಪ್ ಶರ್ಮಾ, ಜೇಸನ್ ಹೋಲ್ಡರ್ ತಲಾ 2 ವಿಕೆಟ್, ನಟರಾಜನ್, ನದೀಮ್ ಹಾಗು ರಶೀದ್ ಖಾನ್ ತಲಾ 1 ವಿಕೆಟ್ ಪಡೆದರು.
ಸನ್ ರೈಸರ್ಸ್ ಹೈದರಾಬಾದ್ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಪ್ರಮುಖ ಎರಡು ವಿಕೆಟ್ ಪಡೆದ ಸಂದೀಪ್ ಶರ್ಮಾ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.