ಶಾರ್ಜಾ : ಐಪಿಎಲ್ 2020 ರ 13 ಆವೃತ್ತಿಯಲ್ಲಿ ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ 56 ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಮುಂಬೈ ಇಂಡಿಯನ್ಸ್ ತಂಡದ ವಿರುದ್ದ 10 ವಿಕೆಟ್ ಗಳ ಗೆಲುವು ದಾಖಲಿಸಿದೆ.
ನಿರ್ಣಾಯಕ ಪಂದ್ಯದಲ್ಲಿ ಮುಂಬೈ ವಿರುದ್ಧ ಈ ಗೆಲುವಿನೊಂದಿದೆ ಸನ್ ರೈಸರ್ಸ್ ಹೈದರಾಬಾದ್ ತಂಡ ಪ್ಲೇ ಆಫ್ ಗೆ ಎಂಟ್ರಿ ಕೊಟ್ಟಿತು. ಇದರಿಂದ ರನ್ ರೇಟ್ ಆಧಾರದಲ್ಲಿ ಕೆಕೆಆರ್ ತಂಡ ಐದನೇ ಸ್ಥಾನ ಪಡೆದಿದ್ದು ಪ್ಲೇ ಆಫ್ ಹಂತದಿಂದ ಹೊರ ಬಿದ್ದಿದೆ.
150 ರನ್ ಗುರಿಯನ್ನು ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್ ತಂಡ 17.1 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 151 ರನ್ ಗಳಿಸಿ 10 ವಿಕೆಟ್ ಗಳ ಗೆಲುವು ದಾಖಲಿಸಿತು. ಸನ್ ರೈಸರ್ಸ್ ಪರ ಆರಂಭಿಕ ಆಟಗಾರರಾದ ವೃದ್ಧಿಮಾನ್ ಸಹಾ -58* ಹಾಗು ಡೇವಿಡ್ ವಾರ್ನರ್-85* ರನ್ ಗಳಿಸಿದರು. ಮುಂಬೈ ಇಂಡಿಯನ್ಸ್ ಪರ ಯಾವೊಬ್ಬ ಬೌಲರ್ ಸಹ ವಿಕೆಟ್ ಪಡೆಯಲಿಲ್ಲ.
ಇದಕ್ಕೂ ಮುಂಚೆ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಗಳನ್ನು ಕಳೆದುಕೊಂಡು 149 ರನ್ ಗಳನ್ನು ಕಲೆಹಾಕಿತು. ಮುಂಬೈ ಪರ ಡಿಕಾಕ್-25, ಸೂರ್ಯ ಕುಮಾರ್ ಯಾದವ್-36, ಇಶಾನ್ ಕಿಶನ್-33 ಹಾಗು ಕಿರಣ್ ಪೊಲಾರ್ಡ್-41 ರನ್ ಗಳಿಸಿದರು. ಸನ್ ರೈಸರ್ಸ್ ಪರ ಸಂದೀಪ್ ಶರ್ಮಾ 3 ವಿಕೆಟ್, ಜೇಸನ್ ಹೋಲ್ಡರ್, ಶಾಬಾಜ್ ನದೀಮ್ 2 ವಿಕೆಟ್, ರಶೀದ್ ಖಾನ್ 1 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಸನ್ ರೈಸರ್ಸ್ ಹೈದರಾಬಾದ್ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಪ್ರಮುಖ ಎರಡು ವಿಕೆಟ್ ಪಡೆದ ಶಾಬಾಜ್ ನದೀಮ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.