ಬೆಂಗಳೂರು: ಎರಡು ವರ್ಷದಿಂದ ಸ್ಥಗಿತಗೊಂಡಿದ್ದ ಶೂ ಮತ್ತು ಸಾಕ್ಸ್ ವಿತರಣೆಯ ಯೋಜನೆಗೆ ಶೀಘ್ರ ಚಾಲನೆ ನೀಡುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.
ಹೌದು, ಶೂ ಮತ್ತು ಸಾಕ್ಸ್ ವಿತರಣೆಯ ಯೋಜನೆಗೆ ₹132 ಕೋಟಿ ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರ, 1-10ನೇ ತರಗತಿ ಮಕ್ಕಳಿಗೆ ಕಪ್ಪು ಶೂ, 2 ಜೊತೆ ಬಿಳಿ ಸಾಕ್ಸ್ ವಿತರಿಸುವಂತೆ ಸೂಚಿಸಿದೆ.
ರಾಜ್ಯದ 46.37 ಲಕ್ಷ ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ಸಿಗಲಿದ್ದು, ಈ ಸೌಲಭ್ಯಕ್ಕಾಗಿ 1-5ನೇ ತರಗತಿ ಮಕ್ಕಳಿಗೆ ₹265, 5-8ನೇ ತರಗತಿ ಮಕ್ಕಳಿಗೆ ₹295, 9 ಹಾಗೂ 10ನೇ ತರಗತಿ ಮಕ್ಕಳಿಗಾಗಿ ₹325 ವ್ಯಯಿಸಬಹುದು ಎಂದು ಅನುಮೋದನೆ ನೀಡಲಾಗಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.