ಬೆಂಗಳೂರು: ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ಸಂಬಂಧ ತೇರದಾಳ ಬಿಜೆಪಿ ಶಾಸಕ ಸಿದ್ದು ಸವದಿ ಹಾಗೂ ಅವರ ಬೆಂಬಲಿಗರು ಪುರಸಭಾ ಸದಸ್ಯೆಯನ್ನು ಎಳೆದಾಡಿದ್ದು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸಿದ್ದು ಕೂಡಲೇ ಶಾಸಕ ಸಿದ್ದು ಸವದಿ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ರಾಜ್ಯ ಬಿಜೆಪಿ ಶಾಸಕ ಸಿದ್ದು ಸವದಿ ಪುರಸಭಾ ಸದಸ್ಯೆಯನ್ನು ಎಳೆದಾಡಿದ್ದು ಅತ್ಯಂತ ಹೇಯ ಕೃತ್ಯ.ಬಿಜೆಪಿಯವರು ಅಧಿಕಾರಕ್ಕಾಗಿ ಎಂಥಹ ಹೀನ ಕೃತ್ಯಕ್ಕೂ ಇಳಿಯುತ್ತಾರೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ.ಬಿಜೆಪಿ ಸರ್ಕಾರ, ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ ಶಾಸಕನನ್ನ ಬಂಧಿಸದೇ ರಕ್ಷಿಸುತ್ತಿರುವುದು ಖಂಡನೀಯ ಎಂದು ಕಾಂಗ್ರೆಸ್ ಪಕ್ಷ ಟೀಕಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಬೇಟಿ ಬಚಾವ್ ಘೋಷಣೆಗೆ ತದ್ವಿರುದ್ಧವಾಗಿ ರಾಜ್ಯ ಬಿಜೆಪಿ ಶಾಸಕನೇ ಮಹಿಳೆಯ ಮೇಲೆ ದೌರ್ಜನ್ಯ ಎಸಗಿ ಹಲ್ಲೆ ನಡೆಸಿದ್ದಾರೆ. ಆದರೂ ಪೊಲೀಸರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.ಈ ಕೃತ್ಯ ಎಸಗಿದ ಸಿದ್ದು ಸವದಿಯವರನ್ನು ತಕ್ಷಣ ಬಂಧಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಬೇಕು ಎಂದು ರಾಜ್ಯ ಕಾಂಗ್ರೆಸ್ ಒತ್ತಾಯಿಸಿದೆ.
ಶಾಸಕ ಸ್ಥಾನದ ಘನತೆ ಮೀರಿ ಪುರಸಭಾ ಸದಸ್ಯೆಯನ್ನು ಎಳೆದಾಡಿದ ಸಿದ್ದು ಸವದಿ ಅವರ ವರ್ತನೆ ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು.ಚುನಾಯಿತ ಜನಪ್ರತಿನಿಧಿಯಾಗಿ ಕೇವಲ ಅಧಿಕಾರಕ್ಕಾಗಿ ಇಂಥಹ ಹೀನ ಕೃತ್ಯ ಎಸಗಿದ ಶಾಸಕ ಸಿದ್ದು ಸವದಿ ಅವರನ್ನು ಪೊಲೀಸರು ಯಾವ ಪ್ರಭಾವಕ್ಕೂ ಒಳಗಾಗದೆ ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಇದನ್ನು ಓದಿ: ಮಹಾಲಿಂಗಪುರ ಪುರಸಭೆ ಸದಸ್ಯೆಯ ಮೇಲೆ ಬಿಜೆಪಿ ಬೆಂಬಲಿಗರ ದೌರ್ಜನ್ಯ; ಇದು ಬಿಜೆಪಿ ಸಂಸ್ಕೃತಿಯೆಂದ ಡಿ ಕೆ ಶಿವಕುಮಾರ್
‘ @BJP4Karnataka ಶಾಸಕ @siddusavadi_bjp ಪುರಸಭಾ ಸದಸ್ಯೆಯನ್ನು ಎಳೆದಾಡಿದ್ದು ಅತ್ಯಂತ ಹೇಯ ಕೃತ್ಯ.
ಬಿಜೆಪಿಯವರು ಅಧಿಕಾರಕ್ಕಾಗಿ ಎಂಥಹ ಹೀನ ಕೃತ್ಯಕ್ಕೂ ಇಳಿಯುತ್ತಾರೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ.
ಬಿಜೆಪಿ ಸರ್ಕಾರ, ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ ಶಾಸಕನನ್ನ ಬಂಧಿಸದೇ ರಕ್ಷಿಸುತ್ತಿರುವುದು ಖಂಡನೀಯ.#ArrestSidduSavadi
— Karnataka Congress (@INCKarnataka) November 13, 2020