ಬೆಂಗಳೂರು: ಸಚಿವ ಸುಧಾಕರ್ ಶಾಸಕರ ‘ಶೀಲ’ ಶಂಕಿಸುವ ಹೇಳಿಕೆ ವಿವಾದ ಸೃಷ್ಟಿಯಾದ ಬೆನ್ನಲ್ಲೇ ರಾಜ್ಯ ಬಿಜೆಪಿ ಸಿದ್ಧರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ‘ತಾವು ಭಾರಿ ಸೊಬಗನಂತೆ ನಟಿಸಬೇಡಿ. ಮಹಿಳೆಯರ ಮೇಲೆ ನೀವು ತೋರಿಸಿದ ಗೌರವವನ್ನು ರಾಜ್ಯದ ಜನತೆ ಸಾಕಷ್ಟು ಬಾರಿ ನೋಡಿದ್ದಾರೆ ಎಂದು ಹೇಳಿದ್ದು, ಪುತ್ರನ ಮೇಲೆ ದೂರು ಹೇಳಿದ್ದಕ್ಕೆ ಮಹಿಳೆಯ ದುಪ್ಪಟ್ಟಾ ಎಳೆದು ಆಕೆಯನ್ನು ಗದರಿಸಿದ್ದು ಮರೆತು ಹೋಯಿತೇ? ಸಮಸ್ಯೆ ತೋಡಿಕೊಂಡ ಮಹಿಳೆ ಮೇಲೆ ಬಾದಾಮಿಯಲ್ಲಿ ಗರಂ ಆಗಿದ್ದು ಮರೆತು ಹೋಯಿತೇ?’ ಎಂದು ಸಿದ್ದರಾಮಯ್ಯ ಅವರು ಮಹಿಳೆಯ ಸೀರಿಗೆ ಕೈ ಹಾಕಿದ ಫೋಟೋ ಅಪ್ಲೋಡ್ ಮಾಡಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ಮಾನ್ಯ @siddaramaiah
ತಾವು ಭಾರೀ ಸೊಬಗನಂತೆ ನಟಿಸಬೇಡಿ. ಮಹಿಳೆಯರ ಮೇಲೆ ನೀವು ತೋರಿಸಿದ ಗೌರವವನ್ನು ರಾಜ್ಯದ ಜನತೆ ಸಾಕಷ್ಟು ಬಾರಿ ನೋಡಿದ್ದಾರೆ.
ಪುತ್ರನ ಮೇಲೆ ದೂರು ಹೇಳಿದ್ದಕ್ಕೆ ಮಹಿಳೆಯ ದುಪ್ಪಟ್ಟಾ ಎಳೆದು ಆಕೆಯನ್ನು ಗದರಿಸಿದ್ದು ಮರೆತು ಹೋಯಿತೇ?
ಸಮಸ್ಯೆ ತೋಡಿಕೊಂಡ ಮಹಿಳೆಯ ಮೇಲೆ ಬಾದಾಮಿಯಲ್ಲಿ ಗರಂ ಆಗಿದ್ದು ಮರೆತು ಹೋಯಿತೇ? pic.twitter.com/NyqHEIRV1u
— BJP Karnataka (@BJP4Karnataka) March 25, 2021




