ಬೆಂಗಳೂರು: ಈ ನಿಮ್ಮ ಆಕ್ರೋಶವೇ ಅಲ್ಲಿ ಪೊಲೀಸರ ಮೇಲೆ ಕೈ ಮಾಡುವಂತೆ ಮಾಡಿದ್ದು, ಪೊಲೀಸರಿಗೆ ಹೊಡೆದ ಅಪ್ರಬುದ್ಧ ವರ್ತನೆಗೆ ಕ್ಷಮೆಯಾಚಿಸಿ ಎಂದು ಸಚಿವ ಶ್ರೀರಾಮುಲು ಅವರು ಕಾಂಗ್ರೆಸ್ ಮುಖಂಡೆ ಸೌಮ್ಯ ರೆಡ್ಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಚಿವ ಶ್ರೀರಾಮುಲು ಅವರು ಟ್ವೀಟ್ ಮಾಡಿದ್ದೂ, ಈ ನಿಮ್ಮ ಆಕ್ರೋಶವೇ ಅಲ್ಲಿ ಪೊಲೀಸರ ಮೇಲೆ ಕೈ ಮಾಡುವಂತೆ ಮಾಡಿದ್ದು.ಪ್ರತಿಭಟನಾಕಾರರು ಕಾನೂನು ಕೈಗೆತ್ತಿಕೊಂಡರೆ ಆ ಕ್ಷಣದಲ್ಲಿ ನಿರ್ಧಾರ ತೆಗೆದುಕೊಂಡು ಅವರನ್ನು ನಿಯಂತ್ರಿಸುವವರು ಪೊಲೀಸರು, ಸರ್ಕಾರವಲ್ಲ. ಕೋಪಕ್ಕೆ ಬುದ್ಧಿ ಕೊಟ್ಟರೆ ಕಾನೂನು, ಸಂವಿಧಾನ ಎಲ್ಲವೂ ಮರೆತುಹೋದೀತು ಸೌಮ್ಯ ರೆಡ್ಡಿ ಯವರೇ.ನಿಮಗೆ ಪ್ರಾಣಾಯಾಮದ ಅಗತ್ಯವಿದೆ.
ನನ್ನ ಮನೆಯ ಹೆಣ್ಣುಮಕ್ಕಳು ಪ್ರಬುದ್ಧರು. ರೈತರ ಪರವಾಗಿರುವ ಕೃಷಿ ಕಾಯ್ದೆಯ ವಿರುದ್ಧ ಹೋರಾಟ ಮಾಡುವವರಲ್ಲ. ಪೊಲೀಸರು ಹೊಡೆದರು ಎಂದು ಆರೋಪಿಸುವ ನೀವು, ರಾಜಕಾರಣಿಯಾಗಿ ಕಾನೂನು ಕ್ರಮ ಕೈಗೊಳ್ಳಬಹುದಿತ್ತಲ್ಲ? ನಮ್ಮ ಸಂವಿಧಾನದ ಮೇಲೆ ಇಷ್ಟು ಬೇಗ ನಂಬಿಕೆ ಕಳೆದುಕೊಂಡುಬಿಟ್ಟಿರೇನು? ಪೊಲೀಸರಿಗೆ ಹೊಡೆದ ಅಪ್ರಬುದ್ಧ ವರ್ತನೆಗೆ ಕ್ಷಮೆಯಾಚಿಸಿ ಎಂದು ಶ್ರೀರಾಮುಲು ಅವರು ಸೌಮ್ಯ ರೆಡ್ಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನ್ನ ಮನೆಯ ಹೆಣ್ಣುಮಕ್ಕಳು ಪ್ರಬುದ್ಧರು. ರೈತರ ಪರವಾಗಿರುವ ಕೃಷಿ ಕಾಯ್ದೆಯ ವಿರುದ್ಧ ಹೋರಾಟ ಮಾಡುವವರಲ್ಲ.
ಪೊಲೀಸರು ಹೊಡೆದರು ಎಂದು ಆರೋಪಿಸುವ ನೀವು, ರಾಜಕಾರಣಿಯಾಗಿ ಕಾನೂನು ಕ್ರಮ ಕೈಗೊಳ್ಳಬಹುದಿತ್ತಲ್ಲ? ನಮ್ಮ ಸಂವಿಧಾನದ ಮೇಲೆ ಇಷ್ಟು ಬೇಗ ನಂಬಿಕೆ ಕಳೆದುಕೊಂಡುಬಿಟ್ಟಿರೇನು?
ಪೊಲೀಸರಿಗೆ ಹೊಡೆದ ಅಪ್ರಬುದ್ಧ ವರ್ತನೆಗೆ ಕ್ಷಮೆಯಾಚಿಸಿ. https://t.co/aedRgWprro— B Sriramulu (@sriramulubjp) January 21, 2021




