ಕುರುಬರ ಎಸ್ಟಿ ಮೀಸಲಾತಿಗಾಗಿ ಪಾದಯಾತ್ರೆ; ಮಾದರ ಚನ್ನಯ್ಯ ಹಾಗೂ ಬೋವಿ ಗುರುಪೀಠದ ಶ್ರೀಗಳಿಂದ ಅಭೂತಪೂರ್ವ ಬೆಂಬಲ

ಚಿತ್ರದುರ್ಗ: ರಾಜ್ಯದಲ್ಲಿರುವ ಸುಮಾರು 60 ಲಕ್ಷ ಕುರುಬರಿಗೆ ಎಸ್ಟಿ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಕಾಗಿನೆಲೆ ಮಠದ ಪೀಠಾಧಿಪತಿ ನಿರಂಜನಾನಂದಪುರಿ ಶ್ರೀಗಳು ಕಾಗಿನೆಲೆಯಿಂದ ಬೆಂಗಳೂರಿಗೆ ಐತಿಹಾಸಿಕ ಕುರುಬರ S T ಹೋರಾಟದ ಪಾದಯಾತ್ರೆ ಆರಂಭಿಸಿದ್ದಾರೆ. ಈ…

Kurubara ST reservation 4

ಚಿತ್ರದುರ್ಗ: ರಾಜ್ಯದಲ್ಲಿರುವ ಸುಮಾರು 60 ಲಕ್ಷ ಕುರುಬರಿಗೆ ಎಸ್ಟಿ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಕಾಗಿನೆಲೆ ಮಠದ ಪೀಠಾಧಿಪತಿ ನಿರಂಜನಾನಂದಪುರಿ ಶ್ರೀಗಳು ಕಾಗಿನೆಲೆಯಿಂದ ಬೆಂಗಳೂರಿಗೆ ಐತಿಹಾಸಿಕ ಕುರುಬರ S T ಹೋರಾಟದ ಪಾದಯಾತ್ರೆ ಆರಂಭಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ನಿರಂಜನಾನಂದಪುರಿ ಶ್ರೀಗಳ ನೇತೃತ್ವದಲ್ಲಿ ಕುರುಬರ ಎಸ್ಟಿ ಮೀಸಲಾತಿಗಿ ಒಂಬತ್ತನೇ ದಿನದ ಪಾದಯಾತ್ರೆಯು ಚಿತ್ರದುರ್ಗ ತಾಲೂಕಿನ ಮಾರಗಟ್ಟ ಗ್ರಾಮದಿಂದ ಆರಂಭವಾಗಿ, ಚಿತ್ರದುರ್ಗ ತಲುಪಿತು. ಈ ಸಂದರ್ಭದಲ್ಲಿ ಶ್ರೀಗಳನ್ನು ಊರಿನ ಮುಖಂಡರು ಅದ್ದೂರಿಯಾಗಿ ಸ್ವಾಗತ ಕೋರಿದರು. ಶ್ರೀಗಳು ಇಂದು ನಗರದ ಕಬೀರಾನಂದ ಭವನದಲ್ಲಿ ವಾಸ್ತವ್ಯ ಹೂಡಿದ್ದು, ಶ್ರೀಗಳು ನಾಳೆ ಮತ್ತೆ ತಮ್ಮ ಪಾದಯಾತ್ರೆಯನ್ನು ಮುಂದುವರಿಸಲಿದ್ದಾರೆ.

ಈ ಸಂದರ್ಭದಲ್ಲಿ ನಿರಂಜನಾನಂದಪುರಿ ಶ್ರೀಗಳ ನೇತೃತ್ವದಲ್ಲಿ ಮಾರಗಟ್ಟದಿಂದ ಗ್ರಾಮದಿಂದ ಮಾಳಪ್ಪನಹಟ್ಟಿ ಕಡೆಗೆ ಪಾದಯಾತ್ರೆ ಹೊರಡುವ ಮಾರ್ಗ ಮದ್ಯದಲ್ಲಿ ಶ್ರೀ ಶಿವಶರಣ ಮಾದರ ಚನ್ನಯ್ಯ ಗುರುಪೀಠದ ಸ್ವಾಮಿಜೀಗಳು ಹಾಗೂ ಬೋವಿ ಸಮಾಜದ ಗುರುಗಳಾದ ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮಿಗಳು ಪಾದಯಾತ್ರೆಗೆ ಬೆಂಬಲ ನೀಡುವುದರ ಮ‌ೂಲಕ ಶುಭ ಕೋರಿದರು.

Vijayaprabha Mobile App free

Kurubas ST reservation 6

ಇನ್ನು ಪರಿಶಿಷ್ಟ ಪಂಗಡಕ್ಕೆ ಕುರುಬ ಸಮುದಾಯವನ್ನು ಸೇರಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಕಾಗಿನೆಲೆ ಕನಕ ಗುರಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಇಂದು ಚಿತ್ರದುರ್ಗ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು ಹಾಗೂ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ಬಂಡೆಪ್ಪ ಖಾಶೆಂಪುರ ಹಾಗೂ ವಿಧಾನ ಪರಿಷತ್ ಸದಸ್ಯರಾದ ಅಡಗೂರು ಎಚ್. ವಿಶ್ವನಾಥ ಅವರು ಸ್ವಾಮೀಜಿ ಗಳೊಂದಿಗೆ ಚರ್ಚಿಸಿದರು.

ಇದನ್ನು ಓದಿ : ಎಂಟನೇ ದಿನದ ಕುರುಬರ S T ಹೋರಾಟದ ಪಾದಯಾತ್ರೆ ಯಶಸ್ವಿ; ಗಮನ ಸೆಳೆಯಿತು ಅಂಗವಿಕಲನೊಬ್ಬ ಹೆಜ್ಜೆ ಹಾಕುವ ದೃಶ್ಯ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.