ದಾವಣಗೆರೆ: ಕುರುಬ ಸಮುದಾಯವನ್ನು ಎಸ್ ಟಿ ಮೀಸಲಾತಿಗೆ ಸೇರಿಸುವಂತೆ ಆಗ್ರಹಿಸಿ ಇಂದು ದಾವಣಗೆರೆಯ ಬೀರಲಿಂಗೇಶ್ವರ ಮೈದಾನದಲ್ಲಿ ಎಸ್.ಟಿ.ಹೋರಾಟ ಸಮಿತಿಯಿಂದ ಬೃಹತ್ ಜಾಗೃತಿ ಸಮಾವೇಶ ನಡೆಯಿತು.
ಸಮಾವೇಶದ ಉದ್ಘಾಟನೆಯನ್ನು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಕಾಗಿನೆಲೆ ಹಾಗು ಹೊಸದುರ್ಗ ಶಾಖಾ ಮಠದ ಶ್ರೀಗಳಾದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಮಾನ್ಯ ಸಚಿವ ಶ್ರೀ ಕೆ.ಸ್.ಈಶ್ವರಪ್ಪನವರು ನೆರವೇರಿಸಿದರು.
ಸಮಾವೇಶದ ವೇದಿಕೆಯಲ್ಲಿ ಶ್ರೀ ವಿರೂಪಾಕ್ಷಪ್ಪನವರು, ಮಾಜಿ ಸಚಿವ ಹಾಲಿ ವಿಧಾನಪರಿಷತ್ ಸದಸ್ಯರಾದ ಶ್ರೀ ಆರ್ ಶಂಕರ್ ಮತ್ತು ಕುರುಬ ಸಮುದಾಯದ ಮುಖಂಡರು ಶ್ರೀ ರಾಜೇಂದ್ರ ಸಣ್ಣಕ್ಕಿ ಹಾಗು ದಾವಣಗೆರೆ, ಹಾವೇರಿ ಹಾಗು ಚಿತ್ರದುರ್ಗದಿಂದ ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ಜನೋಸ್ತಮವು ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಲಾಯಿತು.
ಈ ಹೋರಾಟ ಸಚಿವ ಈಶ್ವರಪ್ಪ ಮತ್ತು ರೇವಣ್ಣ ಅವರನ್ನು ಹಿರೋ ಮಾಡುವುದಕ್ಕೆ ಅಲ್ಲ: ಶ್ರೀ ನಿರಂಜನಾನಂದ ಪುರಿ
ಈ ಸಂದರ್ಭದಲ್ಲಿ ಬೃಹತ್ ಜಾಗೃತಿ ಸಮಾವೇಶವನ್ನು ಉದ್ದೇಶಿಸಿ ಬೃಹತ್ ಜಾಗೃತಿ ಸಮಾವೇಶದಲ್ಲಿ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಮಾತನಾಡಿ, ಈ ಸಮಾವೇಶ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಹೋರಾಟ ಸಚಿವ ಈಶ್ವರಪ್ಪ ಮತ್ತು ರೇವಣ್ಣ ಅವರನ್ನು ಹಿರೋ ಮಾಡುವುದಕ್ಕೆ ಅಲ್ಲ. ಕುರುಬ ಸಮುದಾಯದ ಮೇಲೆ ನಡೆಯುತ್ತಿರುವ ದಬ್ಬಾಳಿಕೆ, ಸಮುದಾಯದ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಯುವುದಕ್ಕೆ, ಕುರುಬರನ್ನು ಹಿರೋ ಮಾಡುವುದಕ್ಕೆ ಈ ಎಸ್ ಟಿ ಮೀಸಲಾತಿ ಹೋರಾಟ ನಡೆಸಲಾಗುತ್ತಿದೆ ಎಂದು ಕಾಗಿನೆಲೆ ಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಗಳು ಹೇಳಿದರು.
ಇನ್ನು ಎಸ್ಟಿ ಮೀಸಲಾತಿ ಹೋರಾಟ ಯೋಚನೆ ಮಾಡಿಯೇ ಕೈ ಹಾಕಿದ್ದೇವೆ ಎಂದು ಶ್ರೀಗಳು, ನಾವು ಮೊದಲು ಹೋಗಿದ್ದು ಸಿದ್ದರಾಮಯ್ಯ ಅವರ ಮನೆಗೆ. ಅವರು ಒಪ್ಪಿಕೊಂಡ ಮೇಲೆಯೇ ನಾವು ಈಶ್ವರಪ್ಪ ಅವರ ಮನೆಗೆ ಹೋಗಿದ್ದು. ಇಲ್ಲಿ ಯಾವ ಪಕ್ಷ ಅಥವಾ ವಿರುದ್ಧವಾಗಿ ಅಲ್ಲ ಎಂದು ಶ್ರೀಗಳು ಹೇಳಿದರು.
ಇನ್ನು ನಾನು ಕಿ ಮೀ ನಡೆಯಲು ಸಿದ್ಧನಿದ್ದೇನ ಶ್ರೀಗಳು ಹೇಳಿದ್ದು ಈಗಾಗಲೇ ನಡೆಸಿದ್ದು ನೀವು ನನ್ನ ಜೊತೆ ಹೆಜ್ಜೆ ಹಾಕಬೇಕು ಅಷ್ಟೇ ಎಂದು ಭಕ್ತರಿಗೆ ಕರೆ ನೀಡಿದರು. ಜನವರಿ 15 ರಂದು ಪಾದಯಾತ್ರೆ ನಡೆಯಲಿದ್ದು, ಫೆಬ್ರುವರಿ 7 ರಂದು ಶ್ರೀ ನಿರಂಜನಾನಂದ ಪುರಿ ಶ್ರೀಗಳ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಕುರುಬ ಸಮುದಾಯದ ಬೃಹತ್ ಸಮಾವೇಶ ನಡೆಯಲಿದೆ.
ಇದನ್ನು ಓದಿ: ಮಕರ ಸಂಕ್ರಾಂತಿ ದಿನದಂದು ಕುರುಬರ ದಿಕ್ಕು ಬದಲಾಗಲಿದೆ: ನಿರಂಜನಾನಂದಪುರಿ ಶ್ರೀ