ಕೇಂದ್ರ ಸರ್ಕಾರದಿಂದ ಮಹಿಳಾ ನೌಕರರಿಗೆ ಗುಡ್ ನ್ಯೂಸ್ ದೊರೆತಿದ್ದು, ಹೆರಿಗೆ ಸಮಯದಲ್ಲಿ ಅಥವಾ ಸ್ವಲ್ಪ ಸಮಯದ ನಂತರ ಮಗುವಿನ ಮರಣದ ಸಂದರ್ಭದಲ್ಲಿ ಮಹಿಳಾ ನೌಕರರು 60 ದಿನಗಳ ವಿಶೇಷ ಹೆರಿಗೆ ರಜೆ ಇರುತ್ತದೆ ಎಂದು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಇಂದು ಆದೇಶ ಹೊರಡಿಸಿದೆ.
ಇಂತಹ ಘಟನೆಗಳಿಂದ ತಾಯಿ ಮಾನಸಿಕವಾಗಿ ನೊಂದಿರುತ್ತಾಳೆ. ಹೀಗಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ. ಹೆರಿಗೆ ರಜೆ ಇಲ್ಲದವರು ಈ ವಿಶೇಷ ರಜೆಯನ್ನು ಬಳಸಿಕೊಳ್ಳುವಂತೆ ಸೂಚಿಸಲಾಗಿದೆ.
ತಾಯಿಯ ಜೀವನದ ಮೇಲೆ ಪರಿಣಾಮ ಬೀರುವ ಮಗುವಿನ ಜನನ ನಂತರ ಅಥವಾ ಮಗುವಿನ ಮರಣದ ಕಾರಣದಿಂದ ಉಂಟಾಗುವ ಆಘಾತವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆದರೆ, ಈ ನಿಯಮ ಎರಡಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿರುವವರಿಗೆ ಮಾತ್ರ ಅನ್ವಯಿಸುತ್ತದೆ.