ನಿಮ್ಮ ಬಳಿ ದ್ವಿಚಕ್ರ ವಾಹನವಿದೆಯೇ? ಅಥವಾ ಕಾರು ಇದೆಯೇ? ಅಗಾದರೆ ನೀವು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಹೊಸ ನಿಯಮಗಳು ಜಾರಿಗೆ ಬರುತ್ತಿದ್ದು, “ವಾಹನ ವಿಮಾ ಪ್ರೀಮಿಯಂ” ಅನ್ನು ಸಂಚಾರ ನಿಯಮಗಳೊಂದಿಗೆ ಲಿಂಕ್ ಮಾಡಲಾಗುತ್ತಿದೆ.
ಹೌದು ಎಲ್ಲರು ಟ್ರಾಫಿಕ್ ರೂಲ್ಸ್ ಪಾಲಿಸಬೇಕು. ಆಗ ಮಾತ್ರ ಯಾರಿಗೂ ತೊಂದರೆ ಆಗುವುದಿಲ್ಲ. ಆದರೆ, ಕೆಲವರು ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುತ್ತಿರುತ್ತಾರೆ. ಆದರೆ ಈ ರೀತಿಯ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರು ಈಗ ಒಂದು ವಿಷಯವನ್ನು ನೆನಪಿಟ್ಟುಕೊಳ್ಳಬೇಕು.
ವಿಮಾ ನಿಯಂತ್ರಕ ಐಆರ್ ಡಿಎಐ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಇನ್ಸೂರೆನ್ಸ್ ಗು ಟ್ರಾಫಿಕ್‌ಗೆ ಏನು ಸಂಬಂಧವಿದೆ ಎಂದು ಆಶ್ಚರ್ಯ ಪಡುತ್ತೀದ್ದೀರಾ?. ನೀವು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ, ನಿಮ್ಮ “ವೆಹಿಕಲ್ ಇನ್ಸೂರೆನ್ಸ್ ಪ್ರೀಮಿಯಂ” ಕೂಡ ಹೆಚ್ಚಾಗುತ್ತದೆ. ಅಂದರೆ ಟ್ರಾಫಿಕ್ ಚಲನೆಯೊಂದಿಗೆ ನೀವು ಹೆಚ್ಚಿನ ಪ್ರೀಮಿಯಂ ಕೂಡ ಪಾವತಿಸಬೇಕಾಗಬಹುದು.
ಐಆರ್‌ಡಿಎಐ ಈಗಾಗಲೇ ತನ್ನ ಪ್ರಸ್ತಾವನೆಯ ಕುರಿತು ಅಂತಿಮ ವರದಿಯನ್ನು ಸಿದ್ಧಪಡಿಸಿದೆ. ಆರಂಭದಲ್ಲಿ ಈ ನಿಯಮಗಳು ದೆಹಲಿ ಎನ್‌ಸಿಆರ್‌ನಲ್ಲಿ ಜಾರಿಗೆ ಬರಬಹುದು ಎನ್ನಲಾಗಿದ್ದು, ಈ ನಿಯಮಗಳು ರಾಷ್ಟ್ರವ್ಯಾಪಿ ಅನ್ವಯಿಸುತ್ತವೆ. ವೆಹಿಕಲ್ ಇನ್ಶೂರೆನ್ಸ್ ರಿನಿವಲ್ ಮಾಡುವ ಸಮಯದಲ್ಲಿ, ಕಳೆದ ಎರಡು ವರ್ಷಗಳ ನಿಮ್ಮ ಸಂಚಾರವನ್ನು ಪರಿಗಣಿಸಿ ಪ್ರೀಮಿಯಂ ಅನ್ನು ನಿರ್ಧರಿಸಲಾಗುತ್ತದೆ.
ಆದ್ದರಿಂದ ನೀವು ಇನ್ನು ಮುಂದೆ ಬಹಳ ಜಾಗರೂಕರಾಗಿರಬೇಕು. ಇಚ್ಛೆ ತಿಳಿದಂತೆ ವಾಹನವನ್ನು ಚಾಲನೆ ಮಾಡಿ ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದರೆ ಸಮಸ್ಯೆಗಳು ಉಂಟಾಗುತ್ತವೆ. ಇದರಿಂದ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಟ್ರಾಫಿಕ್ ಪಾಯಿಂಟ್‌ಗಳಿಗೆ ಅನುಗುಣವಾಗಿ ವಾಹನ ವಿಮಾ ಪ್ರೀಮಿಯಂ ಕೂಡ ಹೆಚ್ಚಾಗುತ್ತದೆ. ಇನ್ನು ನೀವು ಯಾವುದೇ ರೀತಿಯ ಸಂಚಾರ ನಿಯಮಗಳನ್ನು ಉಲ್ಲಂಘಿಸದಿದ್ದರೆ ನೀವು ಪ್ರೀಮಿಯಂನಲ್ಲಿ ರಿಯಾಯಿತಿಯನ್ನು ಸಹ ಪಡೆಯಬಹುದು.