ತೆಲುಗು ಚಿತ್ರೋದ್ಯಮದ ಮೂವರಿಗೆ ‘ಸಹಾಯ ಹಸ್ತ’ ಚಾಚಿದ ಸೋನು ಸೂದ್!

ಮುಂಬೈ:  ಲಾಕ್ ಡೌನ್ ಸಮಯದಲ್ಲಿ ಪ್ರಮುಖ ನಟ ಸೋನು ಸೂದ್ ತಮ್ಮ ಅಸಾಧಾರಣ ಸಾಮಾಜಿಕ ಸೇವೆಯೊಂದಿಗೆ ರಿಯಲ್ ಹೀರೊ ಎಂದೆನಿಸಿಕೊಂಡಿದ್ದರು. ಅವರು ವಲಸೆ ಕಾರ್ಮಿಕರು ಸೇರಿದಂತೆ ಸಂಕಷ್ಟದಲ್ಲಿರುವ ಅನೇಕರಿಗೆ ಸಹಾಯ ಮಾಡಿದ್ದಾರೆ. ಈಗಲೂ ಯಾರಾದರೂ…

sonu sood-vijayaprabha

ಮುಂಬೈ:  ಲಾಕ್ ಡೌನ್ ಸಮಯದಲ್ಲಿ ಪ್ರಮುಖ ನಟ ಸೋನು ಸೂದ್ ತಮ್ಮ ಅಸಾಧಾರಣ ಸಾಮಾಜಿಕ ಸೇವೆಯೊಂದಿಗೆ ರಿಯಲ್ ಹೀರೊ ಎಂದೆನಿಸಿಕೊಂಡಿದ್ದರು. ಅವರು ವಲಸೆ ಕಾರ್ಮಿಕರು ಸೇರಿದಂತೆ ಸಂಕಷ್ಟದಲ್ಲಿರುವ ಅನೇಕರಿಗೆ ಸಹಾಯ ಮಾಡಿದ್ದಾರೆ. ಈಗಲೂ ಯಾರಾದರೂ ಟ್ವಿಟರ್ ಮೂಲಕ ಸಹಾಯ ಕೇಳಿದರೆ ಅವರ ವಿವರಗಳು ತಿಳಿದುಕೊಂಡು ಸಹಾಯವನ್ನು ಮಾಡುತ್ತಿದ್ದಾರೆ. ಆದರೆ, ಸೋನು ಇತ್ತೀಚೆಗೆ ಚಿಕ್ಕ ಮಕ್ಕಳಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡುವುದಾಗಿ ಘೋಷಿಸಿದ್ದು, ಈಗಾಗಲೇ ಅನೇಕ ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ತೆಲುಗು ಚಿತ್ರೋದ್ಯಮದಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿರುವ ಎಂ.ವಿ.ಸುಬ್ಬರಾವ್ ಅವರು ತಮ್ಮ ಎರಡು ವರ್ಷದ ಮಗನಿಗೆ ಹೃದಯ ಸಮಸ್ಯೆ ಇದೆ ಎಂದು ಸೋನು ಸೂದ್ ಅವರಿಗೆ ಟ್ವೀಟ್ ಮಾಡಿದ್ದರು. ಮಗನಿಗೆ ತಕ್ಷಣ ಶಸ್ತ್ರಚಿಕಿತ್ಸೆ ಮಾಡುವಂತೆ ವೈದ್ಯರು ಸಲಹೆ ನೀಡಿದ್ದಾರೆ ಎಂದು ಅವರು ಹೇಳಿದ್ದರು. ಶಸ್ತ್ರಚಿಕಿತ್ಸೆಗಾಗಿ ತನ್ನ ಬಳಿ ಸಾಕಷ್ಟು ಹಣವಿಲ್ಲ, ದಯವಿಟ್ಟು ಮಗನ ಪ್ರಾಣ ಉಳಿಸಿ ಎಂದು ಸೋನು ಸೂದ್ ಅವರಿಗೆ ಟ್ವಿಟರ್‌ನಲ್ಲಿ ಮನವಿ ಮಾಡಿದ್ದರು. ಸುಬ್ಬರಾವ್ ಅವರ ಟ್ವೀಟ್‌ಗೆ ಸ್ಪಂದಿಸಿರುವ ಸೋನು ಸೂದ್, “ನಿಮ್ಮ ಮಗುವನ್ನು ಬುಧವಾರ ಪರೀಕ್ಷಿಸಲಾಗುವುದು. ನಿಮ್ಮ ಮಗುವನ್ನು ಗುರುವಾರ ಮುಂಬೈನ ಎಸ್‌ಆರ್‌ಸಿಸಿ ಆಸ್ಪತ್ರೆಗೆ ದಾಖಲಿಸಲಾಸಿಕೊಳ್ಳುತ್ತಾರೆ. ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದರು.

ಇದೆ ರೀತಿ ಸೋನು ಸೂದ್ ಅವರು ಇನ್ನು ಇಬ್ಬರು ಟಾಲಿವುಡ್ ವ್ಯವಸ್ಥಾಪಕರ ಮಕ್ಕಳಿಗೆ ಮುಂಬೈನ ಎಸ್‌ಆರ್‌ಸಿಸಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ನಟ ಸೋನು ಸೂದ್ ಅವರು ಇತ್ತೀಚಿಗೆ ಬಡ ಕುಟುಂಬದ ಮಕ್ಕಳಿಗೆ ಉಚಿತ ವಿದ್ಯಾರ್ಥಿ ವೇತನ ನೀಡುವುದಾಗಿ ತಿಳಿಸಿದ್ದರು.

Vijayaprabha Mobile App free

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.