ನವದೆಹಲಿ: ಹಿರಿಯ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ಅಹ್ಮದ್ ಪಟೇಲ್ (71) ಅವರ ನಿಧನದ ಬಗ್ಗೆ ಕಾಂಗ್ರೆಸ್ ಮುಖಂಡೆ ಸೋನಿಯಾ ಗಾಂಧಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ‘‘ ಅತ್ಯಂತ ನಿಷ್ಠಾವಂತ, ಉತ್ತಮ ಸ್ನೇಹಿತರಾಗಿದ್ದ, ಅವರ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ನಾನು ಒಬ್ಬ ಮಹಾನ್ ಒಡನಾಡಿಯನ್ನು ಕಳೆದುಕೊಂಡಿದ್ದೇನೆ ಎಂದು ಬಾವದ್ವೇಗಕ್ಕೆ ಒಳಗಾಗಿದ್ದಾರೆ.
“ಅಹ್ಮದ್ ಪಟೇಲ್ ತಮ್ಮ ಜೀವನವನ್ನು ಕಾಂಗ್ರೆಸ್ ಪಕ್ಷಕ್ಕೆ ಅರ್ಪಿಸಿದ್ದಾರೆ. ಅವರು ನಂಬಿಕೆ ಮತ್ತು ಸಮರ್ಪಣೆಗೆ ಹೆಸರಾಗಿದ್ದರು. ತನ್ನ ಕರ್ತವ್ಯವನ್ನು ಪೂರ್ಣ ಬದ್ಧತೆಯಿಂದ ಪೂರೈಸಿದ್ದರು. ಅಹ್ಮದ್ ಪಟೇಲ್ ಸಹಾಯ ಮಾಡುವಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುತ್ತಿದ್ದರು. ಅಹ್ಮದ್ ಪಟೇಲ್ ಅವರ ದಯೆ ಅವರನ್ನು ಎಲ್ಲರಿಗಿಂತ ಹೆಚ್ಚು ವಿಶೇಷರನ್ನಾಗಿ ಮಾಡಿತು ”ಎಂದು ಕಾಂಗ್ರೆಸ್ ಮುಖಂಡೆ ಸೋನಿಯಾ ಗಾಂಧಿ ಅವರು ಅಹ್ಮದ್ ಪಟೇಲ್ ನೆನೆದು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಗಾಂಧಿ ಕುಟುಂಬಕ್ಕೆ ಅತ್ಯಂತ ನಿಷ್ಠಾವಂತರಾಗಿದ್ದ ಅಹ್ಮದ್ ಪಟೇಲ್ ಸೋನಿಯಾ ಗಾಂಧಿಯವರ ಆಪ್ತರಲ್ಲಿ ಒಬ್ಬರಾಗಿದ್ದರು.
ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ: ರಾಹುಲ್ ಗಾಂಧಿ
ಇನ್ನು ಕಾಂಗ್ರೆಸ್ ಮಾಜಿ ಅಧ್ಯಕ್ಷ ಮತ್ತು ಸಂಸದ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿ, ಇದು ದುಃಖದ ದಿನ. ಕಾಂಗ್ರೆಸ್ ಪಕ್ಷದ ಪಿಲ್ಲರ್ ಅಹ್ಮದ್ ಪಟೇಲ್. ಅವರು ಪಕ್ಷಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ಕಠಿಣ ಕಾಲದಲ್ಲಿ ಕೂಡ ನಮ್ಮ ಬೆನ್ನ ಹಿಂದೆಯೇ ಇದ್ದರು.ಅವರು ಅಮೂಲ್ಯವಾದ ಆಸ್ತಿ. ನಾವು ಖಂಡಿತವಾಗಿಯೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ. ಫೈಜಲ್, ಮುಮ್ತಾಜ್ ಮತ್ತು ಇತರ ಕುಟುಂಬ ಸದಸ್ಯರಿಗೆ ನನ್ನ ಆಳವಾದ ಸಂತಾಪಗಳು ಎಂದು ತಿಳಿಸಿದ್ದಾರೆ.
It is a sad day. Shri Ahmed Patel was a pillar of the Congress party. He lived and breathed Congress and stood with the party through its most difficult times. He was a tremendous asset.
We will miss him. My love and condolences to Faisal, Mumtaz & the family. pic.twitter.com/sZaOXOIMEX
— Rahul Gandhi (@RahulGandhi) November 25, 2020