Skanda Sashti | ಸ್ಕಂದ ಷಷ್ಠಿ ಕಾರ್ತಿಕೇಯನನ್ನು ಈ ರೀತಿ ಪೂಜಿಸಿದರೆ ಸಂತಾನ ಭಾಗ್ಯ

Skanda Sashti : ಹಿಂದೂ ಧರ್ಮದಲ್ಲಿ ಸ್ಕಂದ ಷಷ್ಠಿಗೆ ತುಂಬಾ ಮಹತ್ವವಿದ್ದು, ಕಾರ್ತಿಕೇಯ ಅಥವಾ ಸುಬ್ರಹ್ಮಣ್ಯನನ್ನು ಪೂಜಿಸುವುದರಿಂದ ನಿಮ್ಮ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಇದಲ್ಲದೆ, ಮನೆಯಲ್ಲಿ ಸಂತೋಷ & ಸಮೃದ್ಧಿ ಹಾಗೂ ಎಲ್ಲಾ ರೀತಿಯ…

Skanda Sashti

Skanda Sashti : ಹಿಂದೂ ಧರ್ಮದಲ್ಲಿ ಸ್ಕಂದ ಷಷ್ಠಿಗೆ ತುಂಬಾ ಮಹತ್ವವಿದ್ದು, ಕಾರ್ತಿಕೇಯ ಅಥವಾ ಸುಬ್ರಹ್ಮಣ್ಯನನ್ನು ಪೂಜಿಸುವುದರಿಂದ ನಿಮ್ಮ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಇದಲ್ಲದೆ, ಮನೆಯಲ್ಲಿ ಸಂತೋಷ & ಸಮೃದ್ಧಿ ಹಾಗೂ ಎಲ್ಲಾ ರೀತಿಯ ತೊಂದರೆಗಳು ದೂರವಾಗುತ್ತವೆ.

ಷಷ್ಠಿ ತಿಥಿ (shashti tithi)

ಪಂಚಾಂಗದ ಪ್ರಕಾರ, ಮಾರ್ಗಶಿರ ಮಾಸದ ಶುಕ್ಲ ಪಕ್ಷ ಷಷ್ಠಿ ತಿಥಿಯು ಜನವರಿ 04 ರಂದು ರಾತ್ರಿ 10 ಗಂಟೆಗೆ ಪ್ರಾರಂಭವಾಗಿ, ಜನವರಿ 05 ರಂದು ರಾತ್ರಿ 08:15 ಕ್ಕೆ ಕೊನೆಗೊಳ್ಳಲಿದ್ದು, ಸ್ಕಂದ ಷಷ್ಠಿಯನ್ನು (Skanda Sashti) 05ನೇ ಜನವರಿ 2025 ರಂದು ಉದಯ ತಿಥಿಯಂತೆ ಆಚರಿಸಲಾಗುತ್ತದೆ.

ಇದನ್ನೂ ಓದಿ: Rashi bhavishya | ಈ ರಾಶಿಯವರಿಗೆ ಜೂಜಾಟದಲ್ಲಿ ಗೆಲುವೇ ಇಲ್ಲ..!

Vijayaprabha Mobile App free

Skanda Sashti ಪೂಜಾ ವಿಧಾನ (Worship Method)

Skanda Sashti

  • ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಶುಭ್ರ ಬಟ್ಟೆಯನ್ನು ಧರಿಸಿಕೊಂಡು ಸ್ವಚ್ಛವಾದ ಸ್ಥಳದಲ್ಲಿ ಹೂವುಗಳು & ದೀಪಗಳಿಂದ ಅಲಂಕರಿಸಿ.
  • ಕಾರ್ತಿಕೇಯ ವಿಗ್ರಹವನ್ನು ಸ್ವಚ್ಛವಾದ ಪೀಠದ ಮೇಲೆ ಇಟ್ಟು, ಪೂಜೆಗೆ ಬೇಕಾದ ನೀರು, ತುಪ್ಪ, ಜೇನು, ಹಾಲು, ಮೊಸರು, ಸಕ್ಕರೆ, ಶ್ರೀಗಂಧ, ಅಕ್ಷತೆ, ಹೂವು, ಧೂಪ, ದೀಪ, ನೈವೇದ್ಯ ಇತ್ಯಾದಿಗಳನ್ನು ಸಂಗ್ರಹಿಸಿ ತುಪ್ಪದ ದೀಪವನ್ನು ಹಚ್ಚಿ.
  • ಕಾರ್ತಿಕೇಯನಿಗೆ ಗಂಗಾಜಲ, ಹಾಲು, ಮೊಸರು, ತುಪ್ಪ, ಜೇನುತುಪ್ಪ & ಸಕ್ಕರೆಯಿಂದ ಅಭಿಷೇಕ ಮಾಡಿ. ಶ್ರೀಗಂಧ & ಅಕ್ಷತೆಯನ್ನು ದೇವರಿಗೆ ಅರ್ಪಿಸಿ.
  • ಕಮಲದ ಹೂವುಗಳನ್ನು ದೇವರಿಗೆ ಅರ್ಪಿಸಿ. ದೇವರಿಗೆ ಹಣ್ಣುಗಳು ಮತ್ತು ಸಿಹಿತಿಂಡಿಗಳೊಂದಿಗೆ ಆಹಾರ ಪದಾರ್ಥಗಳನ್ನು ಅರ್ಪಿಸಿ.
  • ಇನ್ನು, ಕಾರ್ತಿಕೇಯ ಮಂತ್ರ ಓಂ ಷದಾನಾಯ ನಮಃ, ಓಂ ಸ್ಕಂದ ದೇವಾಯ ನಮಃ, ಓಂ ಶರವಣಭವಾಯ ನಮಃ, ಓಂ ಕುಮಾರಾಯ ನಮಃ.ಎಂದು ಪಠಿಸಿ
  • ಸುಬ್ರಹ್ಮಣ್ಯ ಸ್ವಾಮಿಗೆ ಆರತಿ ಮಾಡಿ, ಪೂಜೆಯ ಸಮಯದಲ್ಲಿ ಯಾವುದೇ ಜಗಳಗಳನ್ನು ಮಾಡಬೇಡಿ. ಉಪವಾಸದ ಸಮಯದಲ್ಲಿ ಮಾಂಸ & ಮದ್ಯವನ್ನು ಸೇವಿಸಬೇಡಿ.

ಇದನ್ನೂ ಓದಿ: Rashi bhavishya 2025 | 2025ರಲ್ಲಿ ಈ ರಾಶಿಗಳಿಗೆ ಇದೆ ಮದುವೆ ಯೋಗ

ಸಂತಾನ ಪ್ರಾಪ್ತಿ (Procreation)

Skanda Sashti

ಸಾಮಾನ್ಯವಾಗಿ ಕಾರ್ತಿಕ ಮಾಸದ ಶುಕ್ಲದ 15 ದಿನಗಳ ಷಷ್ಠಿ ತಿಥಿಯ೦ದು ಆಚರಿಸಲಾಗುತ್ತದೆ. ಈ ದಿನ ಕಾರ್ತಿಕೇಯನನ್ನು ಪೂಜಿಸುವ ಭಕ್ತರಿಗೆ ಧೈರ್ಯ, ಬುದ್ಧಿವಂತಿಕೆ & ಯಶಸ್ಸು ಸಿಗುತ್ತದೆ. ದುಷ್ಟಶಕ್ತಿಗಳು ನಾಶವಾಗಲಿದ್ದು, ಈ ದಿನ ಉಪವಾಸವಿದ್ದು ಸುಬ್ರಹ್ಮಣ್ಯಸ್ವಾಮಿಯನ್ನು ಪೂಜಿಸುವುದರಿಂದ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.