ಎಂಟನೇ ದಿನದ ಕುರುಬರ S T ಹೋರಾಟದ ಪಾದಯಾತ್ರೆ ಯಶಸ್ವಿ; ಗಮನ ಸೆಳೆಯಿತು ಅಂಗವಿಕಲನೊಬ್ಬ ಹೆಜ್ಜೆ ಹಾಕುವ ದೃಶ್ಯ

ಚಿತ್ರದುರ್ಗ, ಜನವರಿ 22 : ಐತಿಹಾಸಿಕ ಕುರುಬರ S T ಮೀಸಲಾತಿ ಹೋರಾಟದ ಪಾದಯಾತ್ರೆ ಕನಕಗುರುಪೀಠ ಶ್ರೀ ಕ್ಷೇತ್ರ ಕಾಗಿನೆಲೆ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ಹಾಗೂ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಕನಕಗುರುಪೀಠ ಹೊಸದುರ್ಗ…

kurubas st reservation vijayaprabha 1

ಚಿತ್ರದುರ್ಗ, ಜನವರಿ 22 : ಐತಿಹಾಸಿಕ ಕುರುಬರ S T ಮೀಸಲಾತಿ ಹೋರಾಟದ ಪಾದಯಾತ್ರೆ ಕನಕಗುರುಪೀಠ ಶ್ರೀ ಕ್ಷೇತ್ರ ಕಾಗಿನೆಲೆ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ಹಾಗೂ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಕನಕಗುರುಪೀಠ ಹೊಸದುರ್ಗ ಶ್ರೀಗಳ ನೇತೃತ್ವದಲ್ಲಿ ಇಂದು ಎಂಟನೇ ದಿನದಂದು ಮುಂಜಾನೆ 6:00 ಕ್ಕೆ ಭರಮಸಾಗರ ಪಟ್ಟಣದಿಂದ ರಾಷ್ಟ್ರೀಯ ಹೆದ್ದಾರಿಯ ಮಾರ್ಗವಾಗಿ ಆರಂಭವಾಗಿದ್ದು ಚಿಕ್ಕಿಬೆನ್ನೂರು (ಸಿರಿಗೆರೆ ಕ್ರಾಸ್) ಬಳಿ ತಲುಪಿದ್ದು ನಾಳೆ ಕೋಟೆ ನಾಡು ಚಿತ್ರದುರ್ಗ ತಲುಪಲಿದ್ದು, ಭವ್ಯ ಸ್ವಾಗತಕ್ಕೆ ಕೋಟೆ ನಾಡು ಹಳದಿಮಯವಾಗಿ ಕಂಗೊಳಿಸುತ್ತಿದೆ.

ಕುರುಬರ S T ಹೋರಾಟದ ಪಾದಯಾತ್ರೆ ಎಂಟನೇ ದಿನವಾದ ಇಂದು ಮುಂಜಾನೆ ಭರಮಸಾಗರ ಪಟ್ಟಣದಿಂದ ರಾಷ್ಟ್ರೀಯ ಹೆದ್ದಾರಿಯ ಮಾರ್ಗವಾಗಿ ಚಿಕ್ಕಬೆನ್ನೂರುಗೆ ತೆರಳುವಾಗ ಅಂಗವಿಕಲನೊಬ್ಬ ಪಾದಯಾತ್ರೆಯಗಳ ಜೊತೆಗೆ ಹೆಜ್ಜೆ ಹಾಕುವ ದೃಶ್ಯ ನೋಡಿದರೆ ಮನಕಲಕುವಂತಿತ್ತು.

kurubas st reservation vijayaprabha

Vijayaprabha Mobile App free

ಕುರುಬರ S T ಹೋರಾಟದ ಪಾದಯಾತ್ರೆ ಸಂದರ್ಭದಲ್ಲಿ ಮಹಿಳೆಯರು ಆರತಿ ಹಿಡಿದು ಕುಂಭವನ್ನು ಹೊತ್ತುಕೊಂಡು ಸಾಗುತ್ತಿರುವ ದೃಶ್ಯ ಎಲ್ಲರ ಗಮನ ಸೆಳೆಯಿತು.

kurubas st reservation vijayaprabha 2

ಇನ್ನು ಕುರುಬರ S T ಹೋರಾಟದ ಪಾದಯಾತ್ರೆ ಹಿನ್ನಲೆಯಲ್ಲಿ ಪಾದಯಾತ್ರೆಯನ್ನು ಮುನ್ನೆಡೆಸುತ್ತಿರುವ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ಅವರಿಗೆ ಊರಿನ ಮುಖಂಡರು ಹೂವಿನ ಹಾರ ಹಾಕಿ ವಿಜ್ರುಂಬಣೆಯಿಂದ ಬರಮಾಡಿಕೊಂಡರು.

ವಿಡಿಯೋ ನೋಡಲು ಲಿಂಕ್ ಕ್ಲಿಕ್ ಮಾಡಿ:

https://fb.watch/3aBR3BZBKG/

ಇದನ್ನು ಓದಿ: ಕುರುಬರ ಎಸ್.ಟಿ ಮೀಸಲಾತಿ: ನಮಗೆ ಮೀಸಲಾತಿ ಸಿಗುತ್ತದೆಯೋ, ಇಲ್ಲವೋ ಗೊತ್ತಿಲ್ಲ; ಫಲ ಸಿಗುವವರೆಗೂ ಹೋರಾಟ: ಶ್ರೀ ನಿರಂಜನಾನಂದಪುರಿ

ಇದನ್ನು ಓದಿ: ಮಕರ ಸಂಕ್ರಾಂತಿ ದಿನದಂದು ಕುರುಬರ ದಿಕ್ಕು ಬದಲಾಗಲಿದೆ: ನಿರಂಜನಾನಂದಪುರಿ ಶ್ರೀ

ಇದನ್ನು ಓದಿ: ಕುರುಬರ ಎಸ್ ಟಿ ಮೀಸಲಾತಿ ರಣಕಹಳೆ; ಸಮುದಾಯದ ಮೇಲಿನ ದಬ್ಬಾಳಿಕೆ, ದೌರ್ಜನ್ಯ ತಪ್ಪಿಸಲು ಹೋರಾಟ: ಶ್ರೀ ನಿರಂಜನಾನಂದ ಪುರಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.