ಬೆಳಗಾವಿ :ಶಿರಾ ಕ್ಷೇತ್ರದಲ್ಲಿ ನವಂಬರ್ 3 ರಂದು ಉಪಚುನಾವಣೆ ನಡೆಯಲಿದ್ದು ಸಿಎಂ ಬಿ ಎಸ್ ಯಡಿಯೂರಪ್ಪ ಪುತ್ರ ಬಿ.ವೈ ವಿಜೇಯೇಂದ್ರ ಅವರು ಶಿರಾ ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದಾರೆ. ಉಪ ಚುನಾವಣೆಯಲ್ಲಿ ಶಿರದಲ್ಲಿ ವಿಜೇಯೇಂದ್ರ ಠಿಕಾಣಿ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ಶಿರಾ ಕ್ಷೇತ್ರಕ್ಕೂ ವಿಜೇಯೇಂದ್ರಗೂ ಏನಪ್ಪಾ ಸಂಬಂಧ ?
ಸಿಎಂ ಬಿಎಸ್ ವೈ ಪುತ್ರ ಅನ್ನೋದು ಬಿಟ್ರೆ ಏನಪ್ಪಾ ಸಂಬಂಧ ? ವಿಜೇಯೇಂದ್ರ ಅಲ್ಲಿ ಹೋಗಿ ಏನಾದ್ರೂ ಕೆಲಸ ಮಾಡಿದ್ದಾನಾ? ಶಿರಾ ಕ್ಷೇತ್ರದಲ್ಲಿನ ಮತದಾರರು ವಿಜೇಯೇಂದ್ರಗೆ ಗೊತ್ತಾ ? ದುಡ್ಡು ಖರ್ಚು ಮಾಡಲು ಹೋಗಿ ಶಿರಾದಲ್ಲಿ ಕುಳಿತಿದ್ದಾನೆ.
ದುಡ್ಡು ಖರ್ಚು ಮಾಡಿ ಕೆಆರ್ ಪೇಟೆಯಲ್ಲಿ ಗೆದ್ದು ಬಿಟ್ಟಿದ್ದಾರೆ. ಅದೇನೋ ಸ್ಟ್ರಾಟಜಿ ಮಾಡ್ತಾರಂತೆ. ಅದ್ಯಾವುದಪ್ಪಾ ನನಗೆ ಗೊತ್ತಿರದೆ ಇರೋ ಸ್ಟ್ರಾಟಜಿ ? ಕೆಆರ್ ಪೇಟೆಯಲ್ಲಿ ಮಾಡಿದ ಸ್ಟ್ರಾಟಜಿ ಶಿರದಲ್ಲೂ ಮಾಡ್ತಾನಂತೆ ಎಂದು ಬೆಳಗಾವಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ.