ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ‘ವೇಂದೇ ಮಾತರಂ’ ಹಾಡುವ ಮೂಲಕ ಸಿದ್ದರಾಮೋತ್ಸವ ಆರಂಭವಾದ ಸಿದ್ದರಾಮೋತ್ಸವಕ್ಕೆ ಜನಸಾಗರ ಹರಿದು ಬಂದಿದ್ದು, ಸಿದ್ದರಾಮೋತ್ಸದಲ್ಲಿ ಹೌಸ್ ಫುಲ್ ಆಗಿದೆ.
ಇನ್ನು, 5 ಲಕ್ಷಕ್ಕೂ ಅಧಿಕ ಕುರ್ಚಿಗಳ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕೂ ಮೀರಿ ಅಭಿಮಾನಿಗಳು ಆಗಮಿಸಿದ್ದಾರೆ. ಅಲ್ಲದೇ ವೇದಿಕೆಯಲ್ಲಿ ನೆರೆದಿದ್ದ ಜನರ ಸಮ್ಮುಖದಲ್ಲಿ ಸಿದ್ದರಾಮಯ್ಯ ಹಾಡಿಗೆ ಅಭಿಮಾನಿಗಳು ಕಂಬಳಿ ಬೀಸಿ ಡ್ಯಾನ್ಸ್ ಮಾಡಿರುವ ದೃಶ್ಯ ಕಂಡು ಬಂದಿದೆ.
ರಾಜ್ಯದ ಜನರೇ ನನ್ನ ದೇವರು: ಸಿದ್ದರಾಮಯ್ಯ
‘ರಾಜ್ಯದ ಆರೂವರೆ ಕೋಟಿ ಜನ ನನ್ನ ದೇವರು’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿ, ‘ದೇವರು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಕಾಣುತ್ತಾನೆ. ಮಹಾತ್ಮ ಗಾಂಧಿ ಸತ್ಯವೇ ದೇವರು ಎಂದು ಹೇಳಿದ್ದರು. ವರನಟ ರಾಜ್‌ಕುಮಾರ್, ಅಭಿಮಾನಿಗಳೇ ನನ್ನ ದೇವರು ಎನ್ನುತ್ತಿದ್ದರು.
ಇನ್ನು, ರಾಜಕಾರಣಿಯಾದ ನನ್ನ ಪಾಲಿಗೆ ರಾಜ್ಯದ ಜನರೇ ದೇವರು. ಈ ಬದುಕಿನ ಉಳಿದ ಅವಧಿಯನ್ನೂ ನಾನು ಜನತಾ ಜನಾರ್ಧನರ ಸೇವೆಗೆ ಅರ್ಪಿಸಿಕೊಳ್ಳುತ್ತೇನೆ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ