Kannada News: CM ಸಿದ್ದರಾಮಯ್ಯ ನಾಡಹಬ್ಬ ದಸರಾ ಮುಗಿದ ತಕ್ಷಣ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. CM ತವರೂರು ಮೈಸೂರಿನಲ್ಲಿ ವಿಶ್ವ ವಿಖ್ಯಾತ ಜಂಬೂ ಸವಾರಿ ನಡೆಯಲಿದ್ದು, ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡಲಿದ್ದಾರೆ.
ಜಂಬೂ ಸವಾರಿ ಮುಗಿದ ಒಂದೆರಡು ದಿನಗಳಲ್ಲಿ ಮಹತ್ತರ ರಾಜಕೀಯ ಬೆಳವಣಿಗೆ ಸಂಭವಿಸಲಿದೆ ಎಂದು ದಟ್ಟ ವದಂತಿ ಹರಡಿದೆ. ಕಾಂಗ್ರೆಸ್ ಮೂಲಗಳು ಸಿದ್ದರಾಮಯ್ಯ ರಾಜೀನಾಮೆ ಪ್ರಸ್ತಾಪವನ್ನು ನಿರಾಕರಿಸಿದ್ದರೂ ತೆರೆಮರೆಯಲ್ಲಿ ರಾಜಕೀಯ ಕಸರತ್ತು ನಡೆಯುತ್ತಿದೆ ಎನ್ನಲಾಗಿದೆ.
Read Also: Heavy rain : 14 ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ.. ಎಲ್ಲೆಲ್ಲಿ..?
ಸಿದ್ದರಾಮಯ್ಯ ಸಿಎಂ ಅವಧಿ ಇನ್ನೆಷ್ಟು ದಿನ?
ಮುಡಾ ಹಗರಣದಲ್ಲಿ ಸಿಲುಕಿ ಒದ್ದಾಡುತ್ತಿರುವ ಸಿಎಂ ಒಂದು ವರ್ಷದ ತನಕ ಸಿಎಂ ಆಗಿ ನನ್ನನ್ನು ಮುಂದುವರೆಸಿ ಎಂದು ಹೇಳಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸಿದ್ದರಾಮಯ್ಯ ಪೂರ್ಣಾವಧಿಗೆ ಸಿಎಂ ಆಗಿ ಮುಂದುವರಿಯುವ ಸಾಧ್ಯತೆ ಕಡಿಮೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಪದತ್ಯಾಗಕ್ಕೆ ನಿರಾಕರಣೆ ಮಾಡಿರುವ ಸಿದ್ದರಾಮಯ್ಯ ದಿಢೀರನೆ ಹೇಳಿಕೆ ನೀಡಿ ಜೊತೆಗೆ ಸ್ಪಷ್ಟೀಕರಣ ಕೂಡ ನೀಡಿದ್ದು, ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ಕಳ್ಳರು ಕಳ್ಳರು ಒಂದಾಗಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಹಗರಣದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಮಾತನಾಡಿದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ವಿರುದ್ಧ ದೂರುದಾರ ಸ್ನೇಹಮಯಿ ಕೃಷ್ಣ ವ್ಯಂಗ್ಯವಾಡಿದ್ದಾರೆ. ʻಕಳ್ಳರು ಕಳ್ಳರು ಒಂದಾಗಿದ್ದಾರೆʼ ಎಂದು ಲೇವಡಿ ಮಾಡಿದ್ದಾರೆ. ‘ಜಿಟಿ ದೇವೇಗೌಡ ಸಹ 50:50 ಅನುಪಾತದ ಫಲಾನುಭವಿಯಾಗಿದ್ದಾರೆ. ಅವರಿಗೂ ತನಿಖೆಯ ಭಯ ಶುರುವಾಗಿದೆ. ಅದೇ ಕಾರಣಕ್ಕೆ ಭಯದಿಂದ ಹೀಗೆ ಮಾತನಾಡುತ್ತಿದ್ದಾರೆ. ಮತ್ತೊಂದಿಷ್ಟು ಕಳ್ಳರು ಮುಂದಿನ ದಿನಗಳಲ್ಲಿ ಇದೇ ರೀತಿ ಮಾತಾಡುತ್ತಾರೆʼ ಎಂದು ಹೇಳಿದ್ದಾರೆ.