Richest Chief Minister | ಸಿದ್ದರಾಮಯ್ಯ ದೇಶದ 3ನೇ ಶ್ರೀಮಂತ CM ; ಕೇವಲ ₹15 ಲಕ್ಷ ಆಸ್ತಿ ಇರುವ ಮಮತಾ ಬ್ಯಾನರ್ಜಿ ಅತಿ ಬಡ CM

Richest Chief Minister | ದೇಶದ ಮುಖ್ಯಮಂತ್ರಿಗಳ ಆಸ್ತಿ ವಿವರವನ್ನು ಅಸೋಸಿಯೇಷನ್ ಫಾರ್‌ಡೆಮಾಕ್ರಟಿಕ್ ರಿಫಾರ್ಮ ಸ್ವಯಂಸೇವಾ ಸಂಸ್ಥೆ ಬಿಡುಗಡೆ ಮಾಡಿದ್ದು, ಕರ್ನಾಟಕ CM ಸಿದ್ದರಾಮಯ್ಯ (Siddaramaiah) 51 ಕೋಟಿ ರೂ ಮೌಲ್ಯದ ಆಸ್ತಿಯೊಂದಿಗೆ ಶ್ರೀಮಂತ…

Richest Chief Minister of the country

Richest Chief Minister | ದೇಶದ ಮುಖ್ಯಮಂತ್ರಿಗಳ ಆಸ್ತಿ ವಿವರವನ್ನು ಅಸೋಸಿಯೇಷನ್ ಫಾರ್‌ಡೆಮಾಕ್ರಟಿಕ್ ರಿಫಾರ್ಮ ಸ್ವಯಂಸೇವಾ ಸಂಸ್ಥೆ ಬಿಡುಗಡೆ ಮಾಡಿದ್ದು, ಕರ್ನಾಟಕ CM ಸಿದ್ದರಾಮಯ್ಯ (Siddaramaiah) 51 ಕೋಟಿ ರೂ ಮೌಲ್ಯದ ಆಸ್ತಿಯೊಂದಿಗೆ ಶ್ರೀಮಂತ ಸಿಎಂಗಳ ಪೈಕಿ 3ನೇ ಸ್ಥಾನ ಪಡೆದಿದ್ದು, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು (Chandrababu Naidu) 931 ಕೋಟಿ ರೂ. ಮೌಲ್ಯದ ಆಸ್ತಿಯೊಂದಿಗೆ ಭಾರತದ ನಂ.1 ಧನಿಕ ಸಿಎಂ ಎನ್ನಿಸಿಕೊಂಡಿದ್ದಾರೆ.

ಇದನ್ನೂ ಓದಿ: New Year Guidelines | ನ್ಯೂ ಇಯರ್‌ ಸಂಭ್ರಮಕ್ಕೆ ಖಾಕಿ ಫುಲ್‌ ಅಲರ್ಟ್; ಈ ತಪ್ಪು ಮಾಡಿದ್ರೆ ಜೈಲೂಟ ಫಿಕ್ಸ್!

ಹೌದು, ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವರದಿ ಪ್ರಕಾರ, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ₹931 ಕೋಟಿ ಆಸ್ತಿಯೊಂದಿಗೆ ಅತ್ಯಂತ ಶ್ರೀಮಂತ ಸಿಎಂ (Richest Chief Minister) ಎನಿಸಿಕೊಂಡಿದ್ದಾರೆ. 2ನೇ ಸ್ಥಾನದಲ್ಲಿ ₹332 ಕೋಟಿ ಆಸ್ತಿಯೊಂದಿಗೆ ಅರುಣಾಚಲ ಪ್ರದೇಶ ಸಿಎಂ ಪೇಮಾ ಖಂಡು ಇದ್ದಾರೆ. ₹51 ಕೋಟಿ ಆಸ್ತಿ ಇರುವ ಸಿದ್ದರಾಮಯ್ಯ 3ನೇ ಸ್ಥಾನದಲ್ಲಿದ್ದಾರೆ.

Vijayaprabha Mobile App free

ಇದನ್ನೂ ಓದಿ: New rules | ಹೊಸ ವರ್ಷಕ್ಕೆ ಹೊಸ ರೂಲ್ಸ್; ಏನೆಲ್ಲಾ ಬದಲಾವಣೆ? ಇಲ್ಲಿದೆ ಸಂಪೂರ್ಣ ಮಾಹಿತಿ

₹15 ಲಕ್ಷ ಆಸ್ತಿ ಇರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಅತ್ಯಂತ ಬಡ ಸಿಎಂ ಆಗಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು 55 ಲಕ್ಷ ರೂಪಾಯಿ ಮೌಲ್ಯದ ಆಸ್ತಿಯೊಂದಿಗೆ ಪಟ್ಟಿಯಲ್ಲಿ ಎರಡನೇ ಬಡ ಮುಖ್ಯಮಂತ್ರಿಯಾಗಿದ್ದಾರೆ. ಇನ್ನು, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಬಳಿ ಕೇವಲ ₹15 ಲಕ್ಷ ಆಸ್ತಿ ಇರುವುದು ಕಂಡು ಅನೇಕರಿಗೆ ಆಶ್ಚರ್ಯ ಎನಿಸಿದೆ.

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.