ಅವನ್ಯಾರೋ ಹೋದವನ ಜೊತೆ ಮತದಾರರು ಹೋಗಲ್ಲ: ಸಿದ್ದರಾಮಯ್ಯ

ಬೆಳಗಾವಿ : ಕಾಂಗ್ರೆಸ್ ಜೆಡಿಎಸ್ ನವರು ಬಿಜೆಪಿ ಬರ್ತರೆಂಬ ಹೇಳಿಕೆ ವಿಚಾರ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಚುನಾವಣೆ ವೇಳೆ ಪಕ್ಷದಿಂದ ಪಕ್ಷಕ್ಕೆ ಹೋಗ್ತಾರೆ, ಬರ್ತಾರೆ ಅದು ಹೆಚ್ಚಿನ ಪ್ರಭಾವ…

Siddaramaih vijayaprabha

ಬೆಳಗಾವಿ : ಕಾಂಗ್ರೆಸ್ ಜೆಡಿಎಸ್ ನವರು ಬಿಜೆಪಿ ಬರ್ತರೆಂಬ ಹೇಳಿಕೆ ವಿಚಾರ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಚುನಾವಣೆ ವೇಳೆ ಪಕ್ಷದಿಂದ ಪಕ್ಷಕ್ಕೆ ಹೋಗ್ತಾರೆ, ಬರ್ತಾರೆ ಅದು ಹೆಚ್ಚಿನ ಪ್ರಭಾವ ಬೀರುವುದಿಲ್ಲ . ಜನ ಏನು ತೀರ್ಮಾನಿಸುತ್ತಾರೆ, ಅವರ ಮನಸ್ಸಲ್ಲೇನಿದೆ ಅದು ಮುಖ್ಯ. ಅವನ್ಯಾರೋ ಹೋದವನ ಜೊತೆ ಮತದಾರರು ಹೋಗಲ್ಲ ಎಂದು ಬೆಳಗಾವಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಅವಧಿಯಲ್ಲಿ ರೈತರ ಆತ್ಮಹತ್ಯೆ ಹೇಳಿಕೆ ವಿಚಾರ:

ಇದೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವಧಿಯಲ್ಲಿ ರೈತರ ಆತ್ಮಹತ್ಯೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ, ಎಲ್ಲ ಕಾಲದಲ್ಲಿಯೂ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಇವರ ಕಾಲದಲ್ಲಿ ರೈತರ ಆತ್ಮಹತ್ಯೆ ನಿಂತು ಹೋಗಿದೆಯಾ ? ಎಂದು ಬೆಳಗಾವಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ

Vijayaprabha Mobile App free

ವೈಮಾನಿಕ ಸಮೀಕ್ಷೆ ಮುಖ್ಯಮಂತ್ರಿಗಳ ಬೇಜವಾಬ್ದಾರಿ:

ವೈಮಾನಿಕ ಸಮೀಕ್ಷೆ ಮುಖ್ಯಮಂತ್ರಿಗಳ ಬೇಜವಾಬ್ದಾರಿ ಅದು. ಮೇಲೆ ತಿರುಗಾಡಿ ಬಂದ್ರೆ ಜನರ ಕಷ್ಟ ಗೊತ್ತಾಗಬೇಕಲ್ಲ?
ಇಷ್ಟು ನೆರೆ ಬಂದರೂ ಪ್ರಧಾನಿ ಕರ್ನಾಟಕಕ್ಕೆ ಬಂದಿದ್ದಾರಾ ? 2009 ರಲ್ಲಿ ಬಿಎಸ್ ವೈ ಸಿಎಂ ಆಗಿದ್ದಾಗ ಪ್ರವಾಹ ಬಂದಿತ್ತು. ಆಗ ಮನಮೋಹನ್ ಸಿಂಗ್ ವೈಮಾನಿಕ ಸಮೀಕ್ಷೆ ಮಾಡಿ 1000 ಕೋಟಿ ರೂಪಾಯಿ ಘೋಷಣೆ ಮಾಡಿದ್ದರು. ಅಮಿತ್ ಷಾ, ನಿರ್ಮಲ ಸೀತಾರಾಮನ್ ಬಂದ್ರು ಹೋದ್ರು ದುಡ್ಡು ಕೊಟ್ರಾ ? ೩೫ ಸಾವಿರ ಕೋಟಿ ಕೇಳಿದ್ರೆ 1652 ಕೋಟಿ ಕೊಟ್ಟಿದ್ದಾರೆ
ಇದಾದ ಮೇಲೆ ಒಂದೇ ಒಂದು ಪೈಸೆಯೂ ಕೊಟ್ಟಿಲ್ಲ ಎಂದು ಬೆಳಗಾವಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.