ಸಿದ್ದರಾಮಯ್ಯ, ಡಿಕೆಶಿ ನಾಟಕ, ಕುತಂತ್ರ ಮಾಡುತ್ತಿದ್ದಾರೆ: ಸಚಿವ ಶ್ರೀರಾಮುಲು

ಮಸ್ಕಿ: ಮಸ್ಕಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಚಿವ ಶ್ರೀರಾಮುಲು, ಮಸ್ಕಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ…

b sriramulu vijayaprabha

ಮಸ್ಕಿ: ಮಸ್ಕಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಚಿವ ಶ್ರೀರಾಮುಲು, ಮಸ್ಕಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಪ್ರತಾಪ್ ಗೌಡ ಪಾಟೀಲರನ್ನು ಗೆಲ್ಲಿಸಲು ನಮ್ಮ ಎಲ್ಲ ಕಾರ್ಯಕರ್ತರು ತಮ್ಮನ್ನು ತಾವು ಬಿ.ಎಸ್.ವೈ., ಶ್ರೀರಾಮುಲು, ಪ್ರತಾಪ್ ಗೌಡ ಪಾಟೀಲ್ ಎಂದುಕೊಂಡು 17 ದಿನ ಹಳ್ಳಿ-ಹಳ್ಳಿಗೆ, ಮನೆ-ಮನೆಗೆ ತೆರಳಿ ಪ್ರಚಾರ ಮಾಡಬೇಕು.

ಕಾಂಗ್ರೆಸ್ ನಾಯಕರು ಏನೇ ತಂತ್ರ ಮಾಡಿದರೂ ಎಲ್ಲ ಕಡೆ ಸೋತಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ನಾಟಕ, ಕುತಂತ್ರ ಮಾಡುತ್ತಿದ್ದಾರೆ. ಆದರೆ, ರಾಜ್ಯದ ಅಭಿವೃದ್ಧಿಗೆ ಯಡಿಯೂರಪ್ಪ ಸರ್ಕಾರವು ಬದ್ಧವಾಗಿದೆ. ಮಸ್ಕಿಗೆ ಈಗಾಗಲೇ ಜಲ ಯೋಜನೆಗಳನ್ನು ನೀಡಿದ್ದು, ಮುಂದೆಯೂ ನೀಡಲಿದೆ.

Vijayaprabha Mobile App free

ಮೀಸಲಾತಿಯ ವಿಷಯದಲ್ಲಿ ಕಾನೂನು ತೊಡಕುಗಳು ಇರುವುದರಿಂದ ಕೊಂಚ ವಿಳಂಬವಾಗುತ್ತಿದೆ. ಅದನ್ನು ನಾವು ಮಾಡೇ ಮಾಡುತ್ತೇವೆ. ನಾವು ನೀಡಿದ ಮೀಸಲಾತಿ ಭರವಸೆಯನ್ನು ಈಡೇರಿಸಿಯೇ ತೀರುತ್ತೇವೆ. ಹಿಂದುಳಿದ ಸಮುದಾಯದ ಏಳಿಗೆಯೇ ನಮ್ಮ ಧ್ಯೇಯವಾಗಿದೆ ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.