ಮನೆ ಕಟ್ಟುವವರಿಗೊಂದು ಬ್ಯಾಡ್ ನ್ಯೂಸ್. ಕಳೆದ 2 ವಾರಗಳಲ್ಲಿ ಉಕ್ಕಿನ ಬೆಲೆ ಟನ್‌ಗೆ 10-11 ಸಾವಿರ ರೂ. ಏರಿಕೆಯಾಗಿದ್ದು, ಟಿಎಂಸಿ ಸ್ಟೀಲ್ ಬೆಲೆ ಟನ್‌ಗೆ 60,180 ರೂ.ನಿಂದ 71,390 ರೂ.ಗೆ ಏರಿಕೆಯಾಗಿದೆ.
ಇನ್ನು, ಕಂಪನಿಗಳು 50 ಕೆಜಿ ಸಿಮೆಂಟ್ ಚೀಲದ ದರವನ್ನು ಬ್ರಾಂಡ್ ಆಧರಿಸಿ, 40-50 ರೂ.ಗೆ ಹೆಚ್ಚಿಸಿದ್ದು, ಕಬ್ಬಿಣದ ಅದಿರು ಮತ್ತು ಕೋಕಿಂಗ್ ಕಲ್ಲಿದ್ದಲು ಬೆಲೆ ಏರಿಕೆಯಾಗಿರುವುದರಿಂದ ಉಕ್ಕಿನ ದರಗಳು ಏರಿಕೆಯಾಗಿದೆ ಎಂದು ಕಂಪನಿಗಳು ಹೇಳುತ್ತಿವೆ.
ಇದರಿಂದ ಸಾಲ ಮಾಡಿಕೊಂಡು, ಕೈಯಲ್ಲಿ ಇದ್ದ ಹಣದಿಂದ ಮನೆ ಕಟ್ಟಲು ಯೋಚಿಸುತ್ತಿರುವ ಜನರಿಗೆ ಕಬ್ಬಿಣ ಮತ್ತು ಸಿಮೆಂಟಿನ ದರ ಏರಿಕೆಯಿಂದ ದೊಡ್ಡ ಹೊಡೆತ ಕೊಟ್ಟಂತಾಗಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.