ಅಮೆಜಾನ್, ಫ್ಲಿಪ್‌ಕಾರ್ಟ್ ಕಂಪನಿಗಳಿಗೆ ಶಾಕ್; ಕೇಂದ್ರದಿಂದ ಹೊಸ ಇ-ಕಾಮರ್ಸ್ ವೆಬ್‌ಸೈಟ್

ನಾವು ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಲು ಬಯಸಿದರೆ ಕೂಡಲೇ ನಾವು ಓಪನ್ ಮಾಡುವ ಅಪ್ಲಿಕೇಶನ್‌ಗಳು ಎರಡು . ಒಂದು ಅಮೆಜಾನ್ ಇನ್ನೊಂದು ಫ್ಲಿಪ್‌ಕಾರ್ಟ್. ಹೆಚ್ಚಿನ ಜನರು ಈ ಎರಡು ಅಪ್ಲಿಕೇಶನ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುತ್ತಾರೆ.…

Amazon Flipkart vijayaprabha

ನಾವು ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಲು ಬಯಸಿದರೆ ಕೂಡಲೇ ನಾವು ಓಪನ್ ಮಾಡುವ ಅಪ್ಲಿಕೇಶನ್‌ಗಳು ಎರಡು . ಒಂದು ಅಮೆಜಾನ್ ಇನ್ನೊಂದು ಫ್ಲಿಪ್‌ಕಾರ್ಟ್. ಹೆಚ್ಚಿನ ಜನರು ಈ ಎರಡು ಅಪ್ಲಿಕೇಶನ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುತ್ತಾರೆ. ಈ ಎರಡು ಇಕಾಮರ್ಸ್ ಕಂಪನಿಗಳು ಅಮೆರಿಕದ ಕಂಪನಿಗಳು.

ಈಗ ಇವುಳಿಗೆ ಪೈಪೋಟಿ ನೀಡಲು ಈಗ ಹೊಸ ದೇಶೀಯ ಇಕಾಮರ್ಸ್ ಪೋರ್ಟಲ್ ಲಭ್ಯವಿದೆ. ಕೇಂದ್ರ ಸರ್ಕಾರ ಹೊಸ ಇಕಾಮರ್ಸ್ ಕಂಪನಿಯನ್ನು ಲಾಂಚ್ ಮಾಡಿದೆ. ಇದರ ಹೆಸರು eKhadiIndia.com ಎಂಎಸ್‌ಎಂಇ ಸಚಿವಾಲಯದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಕೆವಿಐಸಿ (KVIC) ಈ ವೆಬ್‌ಸೈಟ್ ಅನ್ನು ಪ್ರಾರಂಭಿಸಿದೆ.

ಈ ವೆಬ್‌ಸೈಟ್‌ನಲ್ಲಿ 50,000 ಕ್ಕೂ ಹೆಚ್ಚು ಉತ್ಪನ್ನಗಳು ಲಭ್ಯವಿದೆ. ವಿವಿಧ ವರ್ಗಗಳ ಉತ್ಪನ್ನಗಳನ್ನು ಸಹ ಖರೀದಿಸಬಹುದು. ಇವೆಲ್ಲವೂ ಸ್ಥಳೀಯ ಉತ್ಪನ್ನಗಳು. ನೀವು ನಿಮ್ಮ ಮನೆಗೇ ಈ ಉತ್ಪನ್ನಗಳನ್ನು ಡೋರ್ ಡೆಲವರಿ ಪಡೆಯಬಹುದು. ಕೆವಿಐಸಿ ಅಧ್ಯಕ್ಷ ವಿನಯ್ ಕುಮಾರ್ ಸಕ್ಸೇನಾ ಮಾತನಾಡಿ, ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಉದ್ದೇಶದಿಂದ ಹೊಸ ಇಕಾಮರ್ಸ್ ವೆಬ್‌ಸೈಟ್ ಅನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದ್ದಾರೆ.

Vijayaprabha Mobile App free

ಖಾದಿ ಮತ್ತು ವಿಲೇಜ್ ಇಂಡಸ್ಟ್ರೀಸ್ ಉತ್ಪನ್ನಗಳಿಗೆ ಪ್ರತಿವರ್ಷ ಬೇಡಿಕೆ ಹೆಚ್ಚುತ್ತಿದೆ ಎಂದು ಸಕ್ಸೇನಾ ಹೇಳಿದರು. 2018-19ರಲ್ಲಿ ಶೇಕಡಾ 25 ರಷ್ಟು ಹೆಚ್ಚಳ ದಾಖಲಾಗಿದೆ. ಈ ಸೈಟ್‌ನಿಂದ ಬಟ್ಟೆ, ದಿನಸಿ, ಸೌಂದರ್ಯವರ್ಧಕಗಳು, ಮನೆ ಅಲಂಕಾರಿಕ, ಆರೋಗ್ಯ ಮತ್ತು ಕ್ಷೇಮ ಉತ್ಪನ್ನಗಳು, ಉಡುಗೊರೆಗಳಂತಹ ವಿವಿಧ ಉತ್ಪನ್ನಗಳನ್ನು ಖರೀದಿಸಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.