ಮಾಗಡಿ: ಮದುವೆಯಾಗಿದ್ದ ಯುವತಿಯೊಂದಿಗೆ ಮಠಬಿಟ್ಟು ಸ್ವಾಮೀಜಿ ಪರಾರಿಯಾಗಿರುವ ವದಂತಿ ಮಾಗಡಿ ತಾಲೂಕಿನ ಸೋಲೂರಿನಲ್ಲಿ ನಡೆದಿದ್ದು, ಸೋಲೂರಿನ ಗದ್ದುಗೆ ಮಠದ ಶಿವಮಹಂತ ಸ್ವಾಮಿ ಅಲಿಯಾಸ್ ಹರೀಶ್ ಎಂಬ ಸ್ವಾಮೀಜಿ ಮಿಸ್ಸಿಂಗ್ ಆಗಿರುವ ಕಂಪ್ಲೇಟ್ ರಿಜಿಸ್ಟರ್ ಆಗಿದೆ.
ಹೌದು, ಮದುವೆಯಾಗಿ ಒಂದೂವರೆ ತಿಂಗಳಾಗಿದ್ದ ಯುವತಿ ಜೊತೆಗೆ ಎಸ್ಕೇಪ್ ಆಗಿರುವ ವದಂತಿ ಹರಿದಾಡುತ್ತಿದೆ. ಎರಡು ವರ್ಷದ ಹಿಂದೆ ಶಿವಮಹಂತ ಸ್ವಾಮಿಗೆ ಮಠಾಧಿಪತಿಯಾಗಿ ಪಟ್ಟಾಭಿಷೇಕ ಮಾಡಲಾಗಿತ್ತು. ಆದರೆ, ತನಗೆ ಸನ್ಯಾಸತ್ವ ಇಷ್ಟವಿಲ್ಲ, ನಾನು ಮಠ ಬಿಟ್ಟು ಓಡಿಹೋಗ್ತಿದ್ದೀನಿ ಅಂತ ಪತ್ರ ಬರೆದಿಟ್ಟು ಪರಾರಿಯಾಗಿದ್ದು,ನಾನು ಯಾರ ಕೈಗೂ ಸಿಗುವುದಿಲ್ಲ ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಹಿಂದೆ ಕಂಬಾಳು ಮಠದಲ್ಲಿರುವಾಗ ಯುವತಿಯೊಂದಿಗೆ ಪ್ರೀತಿ ನಡೆದಿದ್ದು,ಅದೇ ಹುಡುಗಿ ಜೊತೆ ಶಿವಮಹಂತಸ್ವಾಮಿ ಅಲಿಯಾಸ್ ಹರೀಶ್ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಒಂದೂವರೆ ತಿಂಗಳ ಹಿಂದೆ ಯುವತಿಗೆ ಮದುವೆಯಾಗಿದ್ದು, ಕುದೂರು ಠಾಣೆಯಲ್ಲಿ ಸ್ವಾಮೀಜಿ ಮಿಸ್ಸಿಂಗ್ ಕೇಸ್ ದಾಖಲಾಗಿದೆ. ಇನ್ನು, ಶಿವಮಹಂತ ಸ್ವಾಮೀಜಿ ಈ ಕೆಲಸ ಮಾಡಿರುವುದಕ್ಕೆ ಜನರು ಹಾಗೂ ಮಠದ ಭಕ್ತರು ಶಾಕ್ ಆಗಿದ್ದಾರೆ.