ನವದೆಹಲಿ: ನಾಲ್ಕು ಮಂದಿ ಹಿಜ್ರಾ ವೇಷಧಾರಿಗಳು ಈಶಾನ್ಯ ದೆಹಲಿಯಲ್ಲಿ 13 ವರ್ಷದ ಬಾಲಕನ ಮೇಲೆ ಬಲವಂತವಾಗಿ ಲಿಂಗ ಶಸ್ತ್ರಚಿಕಿತ್ಸೆ ನಡೆಸಿ ಹಿಜ್ರಾ ಆಗಿ ಪರಿವರ್ತಿಸಿದ್ದು, ಬಾಲಕನ ಮೇಲೆ ಕಳೆದ ಕೆಲವು ತಿಂಗಳಿಂದ ಲೈಂಗಿಕ ದೌರ್ಜನ್ಯ ನಡೆಸಿ, ಬಂಧಸಿ ಚಿತ್ರಹಿಂಸೆ ನೀದಿರುವ ಘಟನೆ ನಡೆದಿದೆ.
ಸ್ಥಳೀಯ ಮಹಿಳಾ ಆಯೋಗದ ಪ್ರಕಾರ, ಹಿಜ್ರಾಸ್ ವೇಷದಲ್ಲಿದ್ದ ನಾಲ್ಕು ಜನರು ನೃತ್ಯ ಕಾರ್ಯಕ್ರಮವೊಂದರಲ್ಲಿ ಆ ಬಾಲಕನಿಗೆ ನೃತ್ಯವನ್ನು ಕಲಿಸುತ್ತೇವೆ ಎಂದು ಆಸೆ ತೋರಿಸಿ ಅವರೊಂದಿಗೆ ಕರೆದೊಯ್ದು ಬಂಧಿಸಿದ್ದಾರೆ. ಅಂದಿನಿಂದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಮಾದಕ ವಸ್ತುಗಳಿಗೆ ವ್ಯಸನಿಯಾಗುವಂತೆ ಮಾಡಿದ್ದಾರೆ. ಕೆಲವು ದಿನಗಳ ನಂತರ ಬಾಲಕನಿಗೆ ಶಸ್ತ್ರಚಿಕಿತ್ಸೆ ಮಾಡಿಸಿ, ಆ ಬಾಲಕನನ್ನು ಹಿಜ್ರಾ ಆಗಿ ಪರಿವರ್ತಿಸಿದ್ದಾರೆ. ಅಷ್ಟೇ ಅಲ್ಲದೆ, ಆ ಬಾಲಕನಿಗೆ ಹಾರ್ಮೋನ್ ಚುಚ್ಚುಮದ್ದನ್ನು ನೀಡಿ, ತನ್ನ ಹಾವಭಾವಗಳು ಬದಲಾಗುವಂತೆ ಮಾಡಿದ್ದಾರೆ.
ಇಲ್ಲಿಗೆ ಸುಮ್ಮನಿರದೆ ಬೇರೆಯವರಿಂದ ಲೈಂಗಿಕ ದೌರ್ಜನ್ಯ ನಡೆಸುವುದಲ್ಲದೆ, ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಭಿಕ್ಷೆ ಬೇಡಿಸಿದ್ದರು. ಪ್ರಯಾಣಿಕರು ಏಕಾಂಗಿಯಾಗಿ ಕಾಣಿಸಿಕೊಂಡರೆ ಅವರ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಲು ಆದೇಶಿಸಿದ್ದರು. ಅವರು ಹೇಳಿದಂತೆ ಮಾಡದಿದ್ದರೆ ಊಟ ಸಹ ಕೊಡುತ್ತಿರಲಿಲ್ಲ.
ಆರೋಪಿಗಳು ಇನ್ನೊಬ್ಬ ಬಾಲಕನನ್ನು ಬಲೆಗೆ ಬೀಳಿಸುವ ಪ್ರಯತ್ನದಲ್ಲಿದ್ದಾಗ ಆ ಬಾಲಕ ಅವರಿಂದ ತಪ್ಪಿಸಿಕೊಂಡು ಪೊಲೀಸರನ್ನು ಆಶ್ರಯಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.