ನವದೆಹಲಿ : ಅನಾರೋಗ್ಯದಿಂದ ಬಳಲುತ್ತಿದ್ದ ಸಮಾಜ ಸೇವಕ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಮಾಜಿ ಸಿಎಂ ಮೋತಿಲಾಲ್ ವೋರಾ(93) ಅವರು ಸೋಮವಾರ ನಿಧನ ಹೊಂದಿದ್ದಾರೆ.
ಅನಾರೋಗ್ಯ ಹಿನ್ನೆಲೆ ಮೋತಿಲಾಲ್ ವೋರಾ ಅವರನ್ನು ಕಳೆದ ರಾತ್ರಿ ದೆಹಲಿಯ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ನಿನ್ನೆಯಷ್ಟೇ ಮೋತಿಲಾಲ್ ವೋರಾ ಅವರ ಜನ್ಮದಿನವಿತ್ತು. ದೀರ್ಘ ಸಮಯದವರೆಗೆ ಕಾಂಗ್ರೆಸ್ ಪಕ್ಷದ ಖಚಾಂಚಿಯಾಗಿದ್ದ ಮೋತಿಲಾಲ್ ವೋರಾ ಅವರು, ಮಧ್ಯ ಪ್ರದೇಶದ ಸಿಎಂ ಆಗಿದ್ದರು ಹಾಗೂ ಉತ್ತರ ಪ್ರದೇಶದಲ್ಲಿ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಮಾಜಿ ಸಿಎಂ ಮೋತಿಲಾಲ್ ವೋರಾ ಅವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.