ಹುಬ್ಬಳ್ಳಿ: ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಮತ್ತು ಗೊಟಗೋಡಿಯ ರಾಕ್ ಗಾರ್ಡನ್ ರೂವಾರಿ, ರಂಗಕರ್ಮಿ ಡಾ.ಟಿ.ಬಿ.ಸೊಲಬಕ್ಕನವರ (73) ಗುರುವಾರ ಮಧ್ಯರಾತ್ರಿ 2.45ರ ಸುಮಾರಿಗೆ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದ ರಂಗಕರ್ಮಿ ಡಾ.ಟಿ.ಬಿ.ಸೊಲಬಕ್ಕ ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ರಂಗಕರ್ಮಿ ಡಾ.ಟಿ.ಬಿ.ಸೊಲಬಕ್ಕನವರು ಪತ್ನಿ ಸೇರಿದಂತೆ ಒಬ್ಬ ಪುತ್ರ ಹಾಗು ಒಬ್ಬ ಪುತ್ರಿಯನ್ನು ಅಗಲಿದ್ದು, ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಹಾವೇರಿ ಜಿಲ್ಲೆಯ ಶಿಗ್ಗಾವಿಯ ರಾಕ್ ಗಾರ್ಡನ್ ಪಕ್ಕ ನ್ಯೂ ವರ್ಕ್ ಶಾಪ್ ಹತ್ತಿರ ನಡೆಯಲಿದೆ ಎನ್ನಲಾಗಿದೆ.
ಹಿರಿಯ ನಟ, ರಂಗಕರ್ಮಿ ಡಾ.ಟಿ.ಬಿ.ಸೊಲಬಕ್ಕ ನಿಧನಕ್ಕೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಹಿರಿಯ ನಟ, ರಂಗಕರ್ಮಿ ಡಾ.ಟಿ.ಬಿ.ಸೊಲಬಕ್ಕ ನಿಧನಕ್ಕೆ ಗೃಹ ಸಚಿವ ಬಸವರಾಜ್ ಸಂತಾಪ
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಟ್ವೀಟ್ ಮಾಡಿ, ಹಿರಿಯ ದೊಡ್ಡಾಟ ಕಲಾವಿದ, ಶಿಗ್ಗಾಂವಿ ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್ ರೂವಾರಿ, ಜಾನಪದ ಕಲಾವಿದ, ಆತ್ಮೀಯರಾಗಿದ್ದ ಡಾ|| ಟಿ. ಬಿ. ಸೋಲಬಕ್ಕನವರ ಅವರು ನಿಧನರಾಗಿದ್ದು ತೀವ್ರ ದುಃಖದ ವಿಷಯ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಕುಟುಂಬ ವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ
ಹಿರಿಯ ದೊಡ್ಡಾಟ ಕಲಾವಿದ, ಶಿಗ್ಗಾಂವಿ ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್ ರೂವಾರಿ, ಜಾನಪದ ಕಲಾವಿದ, ಆತ್ಮೀಯರಾಗಿದ್ದ ಡಾ|| ಟಿ. ಬಿ. ಸೋಲಬಕ್ಕನವರ ಅವರು ನಿಧನರಾಗಿದ್ದು ತೀವ್ರ ದುಃಖದ ವಿಷಯ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಕುಟುಂಬ ವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿ: pic.twitter.com/sRSxq1MzuH
— Basavaraj S Bommai (@BSBommai) November 19, 2020