ರಾತ್ರಿ ವೇಳೆ ಉಗುರು ಕತ್ತರಿಸಬಾರದು ಎ೦ದು ಮನೆಯಲ್ಲಿ ಹಿರಿಯರು ಹೇಳುತ್ತಾರೆ. ಆದರೆ, ಯಾಕೆ, ಏನು ಎಂಬಿತ್ಯಾದಿ ಪ್ರಶ್ನೆಗಳು ಕಾಡುತ್ತಿರುತ್ತವೆ. ರಾತ್ರಿ ವೇಳೆ ಏಕೆ ಉಗುರು ಕತ್ತರಿಸಬಾರದು ಎ೦ಬ ವೈಜ್ಞಾನಿಕ-ಧಾರ್ಮಿಕ ಕಾರಣಗಳು ಈ ಲೇಖನದಲ್ಲಿ ವಿವರಿಸಲಾಗಿದೆ.
ಹಿಂದಿನ ವೈಜ್ಞಾನಿಕ ಕಾರಣ
ವೈಜ್ಞಾನಿಕ ಕಾರಣವೆಂದರೆ ಹಿ೦ದಿನ ಕಾಲದಲ್ಲಿ ಈಗಿನಂತೆ ವಿದ್ಯುತ್ ಸೌಲಭ್ಯ ಇರಲಿಲ್ಲ. ಹಾಗಾಗಿ ಕತ್ತಲೆಯಲ್ಲಿ ಉಗುರು ಕತ್ತರಿಸುವಾಗ ಏನಾದರೂ ಗಾಯವಾಗಬಹುದು ಎಂಬ ಕಾರಣಕ್ಕೆ ಕತ್ತಲೆಯಲ್ಲಿ ಅಂದರೆ ರಾತ್ರಿ ಸಮಯದಲ್ಲಿ ಉಗುರು ಕತ್ತರಿಸಬಾರದು ಎ೦ದು ಹೇಳಲಾಗುತ್ತಿತ್ತು.
ತಾಯಿ ಲಕ್ಷ್ಮಿ ಅಸಮಾಧಾನ
ಶಾಸ್ತ್ರದ ಪ್ರಕಾರ, ಲಕ್ಷ್ಮಿ ದೇವಿಯು ಸಂಜೆಯ ವೇಳೆಗೆ ಆಗಮಿಸುತ್ತಾಳೆ ಎ೦ದು ನ೦ಬಲಾಗಿದೆ, ಆದ್ದರಿಂದ ಎಲ್ಲಾ ಶುಚಿಗೊಳಿಸುವ ಸ೦ಬ೦ಧಿತ ಕೆಲಸಗಳನ್ನು ಮುಸ್ಸಂಜೆಗೂ ಮೊದಲು ಮಾಡಬೇಕು ಎ೦ದು ಹೇಳಲಾಗುತ್ತದೆ. ಆದ್ದರಿಂದ, ಸಂಜೆಯ ಮೊದಲು, ಉಗುರುಗಳು & ಕೂದಲನ್ನು ಕತ್ತರಿಸುವ ಕೆಲಸವನ್ನು ಮಾಡಬೇಕು ಎನ್ನಲಾಗುತ್ತದೆ.
ಸರಿಯಾದ ಸಮಯ
ಅಮೇರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿ ಅಸೋಸಿಯೇಷನ್ ಪ್ರಕಾರ, ನಮ್ಮ ಉಗುರುಗಳು ಕೆರಾಟಿನ್ ಎಂಬ ಪ್ರೋಟೀನ್ ಹೊಂದಿದ್ದು, ಅದಕ್ಕಾಗಿಯೇ ಸ್ನಾನದ ನಂತರ ನಿಮ್ಮ ಉಗುರುಗಳನ್ನು ಕತ್ತರಿಸುವುದು ಎಂದಿಗೂ ಕೂಡ ಉತ್ತಮ ಎಂದು ಪರಿಗಣಿಸಲಾಗಿದೆ.
ಉಗುರು ಹೀಗೆ ಕತ್ತರಿಸಿ
ನಿಮ್ಮ ಉಗುರುಗಳನ್ನು ಮೊದಲು ಲಘು ಎಣ್ಣೆಯಲ್ಲಿ ಅಥವಾ ನೀರಿನಲ್ಲಿ ನೆನೆಸಿಡಿ. ಇದು ನಿಮ್ಮ ಉಗುರುಗಳನ್ನು ಮೃದುಗೊಳಿಸಿ, ಚೆನ್ನಾಗಿ ಕತ್ತರಿಸಲು ಸಾಧ್ಯವಾಗುತ್ತದೆ. ಉಗುರುಗಳನ್ನು ಕತ್ತರಿಸಿದ ನಂತರ ಅವುಗಳಿಗೆ ಮಾಯಿಶ್ಚರೈಸರ್ ಮಾಡಲು ಮರೆಯಬೇಡಿ.
ಶಿಸ್ತು ಬೆಳೆಸುತ್ತದೆ
ಸಿದ್ಧಾಂತದ ಪ್ರಕಾರ, ಇದು ನಮ್ಮಲ್ಲಿ ಶಿಸ್ತನ್ನು ಬೆಳೆಸುವ ಒಂದು ಮಾರ್ಗವೂ ಆಗಿರಬಹುದಾಗಿದ್ದು, ಉಗುರುಗಳನ್ನು ಯಾವಾಗ ಕತ್ತರಿಸಬೇಕು ಎಂಬಂತಹ ಸಣ್ಣ ಕೆಲಸಗಳಿಗೆ ನಿರ್ದಿಷ್ಟ ಸಮಯವನ್ನು ಮೀಸಲಿಡುವುದು ದಿನಚರಿಯನ್ನು ಸರಿಯಾಗಿ ಹೊಂದಿಸಲು ಸಹಾಯ ಮಾಡುತ್ತದೆ.
ಬ್ಲ್ಯಾಕ್ ಮ್ಯಾಜಿಕ್
ಬ್ಲ್ಯಾಕ್ ಮ್ಯಾಜಿಕ್‌ನಲ್ಲಿ ಅ೦ದರೆ, ಮಾಟ – ಮಂತ್ರ ಮಾಡುವವರು ಸಾಮಾನ್ಯವಾಗಿ ಮುರಿದ ಉಗುರು ತುಂಡುಗಳನ್ನು, ವ್ಯಕ್ತಿಯು ಧರಿಸಿರುವ ಅ೦ಗಿಯ ತುಣುಕನ್ನು ಕೆಟ್ಟ ಕೆಲಸಕ್ಕಾಗಿ ಬಳಸಿಕೊಳ್ಳುತ್ತಾರೆ. ಆದ್ದರಿಂದ, ರಾತ್ರಿಯಲ್ಲಿ ಉಗುರುಗಳು ನೆಲದ ಮೇಲೆ ಬಿದ್ದಾಗ, ದುಷ್ಟಶಕ್ತಿಗಳು ನಮಗೆ ಹಾನಿಯನ್ನುಂಟು ಮಾಡಬಹುದು ಎನ್ನಲಾಗುತ್ತದೆ.