ಪೋಸ್ಟ್ ಆಫೀಸ್ ವಿವಿಧ ರೀತಿಯ ಸ್ಕೀಮ್ ಗಳನ್ನೂ ನೀಡುತ್ತಿದ್ದು, ಇವುಗಳಲ್ಲಿ ಮರುಕಳಿಸುವ ಠೇವಣಿ ಯೋಜನೆ (Recurring Deposit Scheme) ಕೂಡ ಒಂದು. ಇದರಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಆಕರ್ಷಣೀಯ ಲಾಭವನ್ನು ಪಡೆಯಬಹುದು. ಈ ಲಾಭವನ್ನು ಪಡೆಯಲು ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ (Recurring Deposit) ಖಾತೆಯಲ್ಲಿ ಪ್ರತಿ ತಿಂಗಳು ಸ್ವಲ್ಪ ಹಣವನ್ನು ಜಮಾ ಮಾಡಬೇಕಾಗುತ್ತದೆ.
ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಯೋಜನೆಯಲ್ಲಿ (Recurring Deposit Scheme) ಹಣವನ್ನು ಠೇವಣಿ ಇಡುವುದರಿಂದ ಯಾವುದೇ ಅಪಾಯವಿರುವುದಿಲ್ಲ. ನಿಖರವಾದ ಲಾಭವನ್ನು ಪಡೆಯಬಹುದು. ನೀವು ಕನಿಷ್ಠ ೧೦೦ ರೂಗಳಿಂದ ಪೋಸ್ಟ್ ಆಫೀಸ್ ಆರ್ಡಿ ಖಾತೆಯನ್ನು ತೆರೆಯಬಹುದು. ನೀವು ಪ್ರತಿ ತಿಂಗಳು ಒಂದು ನಿರ್ದಿಷ್ಟ ಮೊತ್ತವನ್ನು ಠೇವಣಿ ಮಾಡಿದರೆ, ಸ್ವಲ್ಪ ಸಮಯದ ನಂತರ ಠೇವಣಿ ಇರಿಸಿದ ಹಣದ ಜೊತೆಗೆ ನಿಮಗೆ ಬಡ್ಡಿ ಸಿಗುತ್ತದೆ.
ಪೋಸ್ಟ್ ಆಫೀಸ್ ಆರ್ಡಿ ಖಾತೆ ಮುಕ್ತಾಯ ಅವಧಿ ಈಗ ಐದು ವರ್ಷಗಳು. ನಿಮಗೆ ಅಗತ್ಯವಿದ್ದರೆ ಅದನ್ನು ಐದು ವರ್ಷಗಳ ದರದಲ್ಲಿ ವಿಸ್ತರಿಸಬಹುದು. ನೀವು ಆರ್‌ಡಿ ಖಾತೆಯನ್ನು ಒಂದು ಅಂಚೆ ಕಚೇರಿಯಿಂದ ಇನ್ನೊಂದಕ್ಕೆ ವರ್ಗಾಯಿಸಬಹುದಾಗಿದ್ದು, ಇದು ಮೂರು ತಿಂಗಳಿಗೊಮ್ಮೆ ಬದಲಾಗಬಹುದು.
ಉದಾಹರಣೆಗೆ, ನೀವು ಪೋಸ್ಟ್ ಆಫೀಸ್ ಯೋಜನೆಯಲ್ಲಿ ತಿಂಗಳಿಗೆ ರೂ .10,000 ಹೂಡಿಕೆ ಮಾಡಿದ್ದೀರಿ ಎಂದು ಭಾವಿಸೋಣ. ಹತ್ತು ವರ್ಷಗಳವರೆಗೆ ನೀವು ಠೇವಣಿ ಮಾಡಿದ್ದೀರಿ. ಈಗ ನೀವು ಹೂಡಿಕೆ ಮಾಡಿದ ಹಣ 12 ಲಕ್ಷ ರೂ. ಈಗ ನೀವು ಮೆಚ್ಯೂರಿಟಿ ಸಮಯದಲ್ಲಿ ರೂ .16.28 ಲಕ್ಷ ಪಡೆಯುತ್ತೀರಿ. ಇಲ್ಲಿ ಬಡ್ಡಿದರ ಶೇ 5.8 ರಷ್ಟಿದೆ.