ಬ್ಯಾಂಕ್‌ ಗ್ರಾಹಕರಿಗೆ ಗುಡ್‌ ನ್ಯೂಸ್‌: FD ಮೇಲಿನ ಬಡ್ಡಿ ದರ ಹೆಚ್ಚಳ

ದೇಶದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2 ಕೋಟಿ ರೂಗಿಂತ ಕಡಿಮೆ ಸ್ಥಿರ ಠೇವಣಿಗಳ (FD) ಮೇಲಿನ ಬಡ್ಡಿದರಗಳನ್ನ ಹೆಚ್ಚಿಸಲಾಗಿದ್ದು, ಆಗಸ್ಟ್‌ 13 ರಿಂದಲೇ ಪರಿಷ್ಕೃತ ದರಗಳು ಅನ್ವಯವಾಗಲಿವೆ ಎಂದು ಎಸ್‌ಬಿಐ…

sbi-schemes-vijayaprabha-news

ದೇಶದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2 ಕೋಟಿ ರೂಗಿಂತ ಕಡಿಮೆ ಸ್ಥಿರ ಠೇವಣಿಗಳ (FD) ಮೇಲಿನ ಬಡ್ಡಿದರಗಳನ್ನ ಹೆಚ್ಚಿಸಲಾಗಿದ್ದು, ಆಗಸ್ಟ್‌ 13 ರಿಂದಲೇ ಪರಿಷ್ಕೃತ ದರಗಳು ಅನ್ವಯವಾಗಲಿವೆ ಎಂದು ಎಸ್‌ಬಿಐ ಬ್ಯಾಂಕ್‌ ತನ್ನ ವೆಬ್​​ಸೈಟ್​​ನಲ್ಲಿ ತಿಳಿಸಿದೆ.

ಹೌದು, 180 ದಿನಗಳಿಂದ 210 ದಿನಗಳಲ್ಲಿ ಪಕ್ವವಾಗುವ ನಿಶ್ಚಿತ ಠೇವಣಿಗೆ ಇನ್ನು 4.55% ಬಡ್ಡಿ ದರವನ್ನು ನೀಡಲಾಗುವುದು ಎಂದು ತಿಳಿಸಿದೆ. ಇದು ಈ ಹಿಂದೆ 4.40% ರಷ್ಟಿತ್ತು. ಇನ್ನು 2 ರಿಂದ 3 ವರ್ಷದೊಳಗಿನ ಕಡಿಮೆ ಅವಧಿಯ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರವನ್ನೂ 5.35% ರಿಂದ 5.50% ಕ್ಕೆ ಹೆಚ್ಚಿಸಿದೆ.

ಪ್ರಸ್ತುತ 7 ದಿನಗಳಿಂದ 10 ವರ್ಷಗಳವರೆಗೆ ಪಕ್ವತೆಯೊಂದಿಗೆ ನಿಶ್ಚಿತ ಠೇವಣಿಗಳನ್ನು ಒದಗಿಸುತ್ತಿದೆ, ಸಾಮಾನ್ಯ ಜನರಿಗೆ 2.90% ರಿಂದ 5.65% ವರೆಗೆ ಬಡ್ಡಿದರಗಳನ್ನ ನೀಡುತ್ತಿದೆ ಎಂದು ಎಸ್‌ಬಿಐ ಬ್ಯಾಂಕ್‌ ತನ್ನ ವೆಬ್​​ಸೈಟ್​​ನಲ್ಲಿ ತಿಳಿಸಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.